ಕುರಿತಳಿ ವೀಕ್ಷಣೆಗೆ 23ರಿಂದ ಪ್ರವಾಸ

7

ಕುರಿತಳಿ ವೀಕ್ಷಣೆಗೆ 23ರಿಂದ ಪ್ರವಾಸ

Published:
Updated:

ಕನಕಪುರ: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಕುರಿ ಪೋಷಕರ ಸಂಘದ ವತಿಯಿಂದ ಕುರಿ ತಳಿ ವೀಕ್ಷಣೆಗೆ ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಪ್ರವಾಸ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

  ಸಂಘದ 25 ಸದಸ್ಯರು ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.  ಮೊದಲಿಗೆ ಫೆಬ್ರುವರಿ 23ರಂದು ಪೂನಾ ಸಮೀಪದಲ್ಲಿರುವ  ಮೆಹಂದಿ ಫಾರಂನಲ್ಲಿನ ದಕ್ಷಿಣ ಆಫ್ರಿಕಾದ ಬೈಯರ್ ಮೇಕೆ ವೀಕ್ಷಿಸಲಿದ್ದಾರೆ.ಫೆಬ್ರುವರಿ 27ಮತ್ತು 28 ರಂದು ನಾಸಿಕ್ ಜಿಲ್ಲೆಯ ಪಲ್ಟಾನ್ ಫಾರಂನಲ್ಲಿ ಮೂರು ಮರಿ ಹಾಕುವ ಕುರಿಗಳನ್ನು ವೀಕ್ಷಣೆ ಮಾಡಲು ಈ ಪ್ರವಾಸ ಕೈಗೊಂಡಿದ್ದಾರೆ ಎಂದು ಅಧ್ಯಕ್ಷ ಎಚ್.ಕೆ.ತಮ್ಮಯ್ಯ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry