ಶುಕ್ರವಾರ, ಜನವರಿ 24, 2020
21 °C

ಕುರಿಯ ಹೊಟ್ಟೆಯಲ್ಲಿ ಕೋತಿ ಮರಿ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ:ಸಮೀಪದ ಹಳ್ಳಿಬೈಲಿನಲ್ಲಿ (ಹಾನಗಲ್ ತಾಲ್ಲೂಕು) ಕುರಿಯೊಂದು ಕೋತಿ ಮರಿಗೆ ಜನ್ಮ ನೀಡಿದೆ ಎಂಬ ಸುದ್ದಿ ಹರಡಿ ಅಚ್ಚರಿಗೆ ಕಾರಣವಾಯಿತು.ಗ್ರಾಮದ ಜಮೀನೊಂದರಲ್ಲಿ ಕುರಿಗಳ ಹಿಂಡನ್ನು ಬಿಟ್ಟಿರುವ ಬೆಳಗಾವಿ ಮೂಲದ ಬೀರಪ್ಪ ಅವರ ಮಾಲೀಕತ್ವದ ಕುರಿ ಶನಿವಾರ ರಾತ್ರಿ ಜನ್ಮ ನೀಡಿರುವ ಮರಿ ಕೋತಿ ರೀತಿ ಇದ್ದು ಅಚ್ಚರಿಗೆ ಕಾರಣವಾಗಿದೆ ಎಂದು ಸ್ಥಳದಲ್ಲಿ ಬೀಡು ಬಿಟ್ಟಿರುವ ಕುರುಬರ ತಂಡದವರು ತಿಳಿಸಿದ್ದಾರೆ. ಮರಿಯನ್ನು  ತುಂಬ ಕಷ್ಟಪಟ್ಟು ಹೊರ ತೆಗೆಯಬೇಕಾಯಿತು ಎಂದು ತಿಳಿಸಿದ್ದಾರೆ.ಮರಿ ಸಂಪೂರ್ಣ ಕಪ್ಪು ಬಣ್ಣ ಹೊಂದಿದ್ದು, ದೇಹದ ಆಕಾರ, ಮುಖ, ಕೂದಲು, ಬಾಲ, ಕಿವಿ ಕೋತಿಯ ಮರಿಯನ್ನೇ ಹೋಲುತ್ತಿದೆ. ಚಟುವಟಿಕೆಯಿಂದ ಕೂಡಿದೆ. ಕುರಿ ಅದಕ್ಕೆ ಹಾಲನ್ನು ಕುಡಿಸದೇ ಇರುವುದರಿಂದ ಬಾಟಲಿ ಮೂಲಕ ಕುಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.ಈ ಕುರಿತು ತಾಲ್ಲೂಕು ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಂಗಸ್ವಾಮಿ ಅವರನ್ನು `ಪತ್ರಿಕೆ~ ಸಂಪರ್ಕಿಸಿದಾಗ, ಈವರೆಗೆ ಇಂತಹ ಪ್ರಕರಣಗಳು ವರದಿ ಆಗಿಲ್ಲ. ಬಹುತೇಕ ಅಸಾಧ್ಯ ಆಗಿದ್ದು, ಪರಿಶೀಲನೆ ನಂತರ ವಿವರ ದೊರಕಬಹುದು ಎಂದಿದ್ದಾರೆ.  

ಪ್ರತಿಕ್ರಿಯಿಸಿ (+)