ಗುರುವಾರ , ಅಕ್ಟೋಬರ್ 17, 2019
22 °C

ಕುಲಪತಿಯಿಂದ ಅವ್ಯವಹಾರ: ಮಧ್ಯಂತರ ವರದಿ

Published:
Updated:

ನವದೆಹಲಿ (ಪಿಟಿಐ): ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಕುಲಪತಿ ಪಿ.ಕೆ. ಅಬ್ದುಲ್ ಅಜೀಜ್ ಅವರು ಹಣಕಾಸು ಅವ್ಯವಹಾರ ನಡೆಸಿದ್ದಾರೆ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಹೇಳಿದೆ.

ಕೆಲವೊಂದು ಭತ್ಯೆ ಪಡೆಯಲು ಅರ್ಹರಲ್ಲದಿದ್ದರೂ ಕುಲಪತಿಗಳು ಅದನ್ನು ಪಡೆದಿದ್ದಾರೆ ಎಂಬ ಅಂಶ ಈ ವರದಿಯಲ್ಲಿದೆ.  ಪ್ರಕರಣ ತನಿಖೆ ಪೂರ್ಣಗೊಂಡ ಬಳಿಕವಷ್ಟೆ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಕುರಿತು ಅಂತಿಮ ಅಭಿಪ್ರಾಯ ಮತ್ತು ಇತರ ಆರೋಪಗಳ ಬಗ್ಗೆ ನಿಲುವು ತೆಗೆದುಕೊಳ್ಳಲು ಸಾಧ್ಯ ಎಂದು ಸಿಬಿಐ ಮೂಲಗಳು ಹೇಳಿವೆ.

Post Comments (+)