ಶುಕ್ರವಾರ, ಮೇ 27, 2022
21 °C

ಕುಲಪತಿ ಪ್ರಭುದೇವ್ :ಪದಚ್ಯುತಿಗೆ ಶಿಕ್ಷಕರ ಪರಿಷತ್ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬೆಂಗಳೂರು ವಿ.ವಿ  ಕುಲಪತಿ ಡಾ.ಎನ್.ಪ್ರಭುದೇವ್ ವಿ.ವಿ ಅಭಿವೃದ್ಧಿಗೆ ತೊಡಕುಂಟು ಮಾಡುತ್ತಿದ್ದು, ಸರ್ಕಾರ ಕೂಡಲೇ ಅವರನ್ನು ಕುಲಪತಿಗಳ ಸ್ಥಾನದಿಂದ ಕೆಳಗಿಳಿಸಬೇಕು~ ಎಂದು ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಪರಿಷತ್ತು ಒತ್ತಾಯಿಸಿದೆ.ಜ್ಞಾನಭಾರತಿ ಆವರಣದಲ್ಲಿ ಇತ್ತೀಚೆಗೆ ನಡೆದ ಪರಿಷತ್ತಿನ ಸರ್ವ ಸದಸ್ಯರ ಸಭೆಯಲ್ಲಿ ಪರಿಷತ್ತು ಈ ನಿರ್ಣಯ ತೆಗೆದುಕೊಂಡಿದೆ.`ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಪರಿಷತ್ತಿನ ಪದಾಧಿಕಾರಿಗಳ ಜೊತೆಗೆ ವ್ಯವಹರಿಸಬಾರದು ಹಾಗೂ ಪರಿಷತ್ತನ್ನು ಮಾನ್ಯ ಮಾಡಬಾರದೆಂದು ಕುಲಪತಿಯವರು ಸುತ್ತೋಲೆ ಹೊರಡಿಸಿದ್ದಾರೆ.

 

ಪರಿಷತ್ತಿನ ಕಾರ್ಯ ಕಲಾಪಗಳನ್ನು ನಿರ್ವಹಿಸಲು ಆಡಳಿತಧಿಕಾರಿ ಮತ್ತು ಚುನಾವಣಾಧಿಕಾರಿಗಳನ್ನು ನೇಮಿಸಿದ್ದಾರೆ. ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಆಡಳಿತ ವಿಷಯಗಳ ಬಗ್ಗೆ ಯೋಚಿಸದೇ ಕುಲಪತಿಯವರು ಪರಿಷತ್ತಿನ ಮೇಲೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ~ ಎಂದು ಪರಿಷತ್ತು ಟೀಕಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.