ಕುಲಸಚಿವ ಅಶೋಕ್‌ಕುಮಾರ್‌ ಅಮಾನತು

7

ಕುಲಸಚಿವ ಅಶೋಕ್‌ಕುಮಾರ್‌ ಅಮಾನತು

Published:
Updated:

ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅಂಕಪಟ್ಟಿಗಳನ್ನು ತಿದ್ದಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಅಲ್ಲದೆ ಈ ಪ್ರಕರಣದ ಆರೋಪ ಎದುರಿಸುತ್ತಿರುವ ಕುಲಸಚಿವ (ಮೌಲ್ಯಮಾಪನ) ಪ್ರೊ.ಎನ್‌.ಎಸ್‌. ಅಶೋಕ್‌ ಕುಮಾರ್‌ ಅವರನ್ನು ಅಮಾನತು ಮಾಡಲಾಗಿದೆ.ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದ್ದು, ಈಗಾಗಲೇ ಅಶೋಕ್‌ಕುಮಾರ್‌ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ ತಿಳಿಸಿದರು.ಎಂಬಿಬಿಎಸ್‌ನಲ್ಲಿ ಅನುತ್ತೀರ್ಣ ರಾಗಿರುವ ಮೂವರು ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ತಿದ್ದಿ ಉತ್ತೀರ್ಣಗೊಳಿಸಿರುವ ಆರೋಪ ಅಶೋಕ್‌ಕುಮಾರ್‌ ಮೇಲಿದೆ.ತನಿಖೆಗೆ ಕೋರ್ಟ್ ತಡೆ: ಈ ಮಧ್ಯೆ ಕುಲಸಚಿವ (ಮೌಲ್ಯ­ಮಾಪನ) ಡಾ.ಎನ್.ಎಸ್. ಅಶೋಕ್ ಕುಮಾರ್ ಮತ್ತು ಎಚ್.ಎನ್. ರಮೇಶ್ ವಿರುದ್ಧದ ತನಿಖೆಗೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಶುಕ್ರವಾರ ತಡೆಯಾಜ್ಞೆ ನೀಡಿದೆ. ಅಂಕಪಟ್ಟಿ ತಿದ್ದಿದ ಪ್ರಕರಣದಲ್ಲಿ ಬೆಂಗಳೂರಿನ ತಿಲಕನಗರ ಪೊಲೀಸರು ಎಫ್ಐಆರ್‌ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry