ಬುಧವಾರ, ಜೂನ್ 23, 2021
23 °C

ಕುಲಾಂತರಿ ತಳಿ ಮುಕ್ತ ರಾಜ್ಯ ಘೋಷಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಕೃಷಿ ಮತ್ತು ಆಹಾರದಲ್ಲಿ ಕುಲಾಂತರಿ ವಿರೋಧಿಸಿ ಹಾಗೂ ಬೀಜ ಸಂಪತ್ತು ಮೆರೆಸುವ ಉದ್ದೆೀಶದಿಂದ ಜಿಲ್ಲೆಯ್ಲ್ಲಲಿ ಮೂರು ದಿನಗಳಿಂದ ನಡೆದ `ಅಂದು ಉಪ್ಪು ಇಂದು ಬೀಜ~ ಜಾಥಾ ಗುರುವಾರ ಸಂಜೆ ನಗರದಲ್ಲಿ ಮುಕ್ತಾಯ ಗೊಂಡಿತು.ಜಿಲ್ಲೆಯ ಹಿರೇಕೆರೂರಿನಿಂದ ಆರಂಭವಾಗಿದ್ದ ಜಾಥಾ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸುಮಾರು 20ಕ್ಕೂ ಹಳ್ಳಿಗಳಲ್ಲಿ ಸಂಚರಿಸಿ ಗುರುವಾರ ಸಂಜೆ ನಗರಕ್ಕೆ ಆಗಮಿಸಿತಲ್ಲದೇ, ನಗರದ ಹುತಾತ್ಮ ಮೈಲಾರ ಮಹಾದೇವ ವೃತ್ತದಲ್ಲಿ ಸಭೆಯಾಗಿ ಮಾರ್ಪಟ್ಟಿತು. ಕೃಷಿ ಪಂಡಿತ ಪ್ರಶಸ್ತಿ ವಿಜೇತ ಚನ್ನಬಸಪ್ಪ ಕೊಂಬಳಿ ಮಾತ ನಾಡಿ, ಕುಲಾಂತರಿ ತಳಿಗಳಿಂದ ದೇಶದ ಕೃಷಿ ವಿದೇಶಿ ಕಂಪೆನಿಗಳ ಕೈಗೊಂಬೆಯಾಗಿದೆ. ಕುಲಾಂತರಿ ಬೀಜಗಳು ಕೇವಲ ಭೂಮಿಗೆ ಮಾತ್ರ ವಿಷ ಉಣಿಸದೇ ಆ ಬೆಳೆಯನ್ನು ಆಹಾರವಾಗಿ ಬಳ ಸುವ ಜನರಿಗೂ ವಿಷ ಉಣಿಸಲಿದೆ ಎಂದು ಹೇಳಿದರು.ತಲೆ ತಲಾಂತರದಿಂದ ದೇಶದ ಜನರಿಗೆ ಅನ್ನ ನೀಡುವ ಅನ್ನದಾತ ಕುಲಾಂತರಿ ಬೀಜಗಳಿಂದ ಜನರಿಗೂ ವಿಷಯುಕ್ತ ಆಹಾರ ನೀಡುವಂತಾ ಗಿದೆ. ರೈತರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮುಂಬರುವ ದಿನಗಳಲ್ಲಿ ಯಾವುದೇ ಕಾರಣಕ್ಕೂ ಕುಲಾಂತರಿ ತಳಿ ಬೀಜಗಳನ್ನು ಬಳಸಬಾರದು ಎಂದು ಸಂಕಲ್ಪ ಮಾಡಬೇಕು ಎಂದು ಸಲಹೆ ಮಾಡಿದರು.ಕೇಂದ್ರ ಸರ್ಕಾರ ಜೈವಿಕ ತಂತ್ರಜ್ಞಾನ ನಿಯಂತ್ರಣ ಮಸೂದೆಯಿಂದ ಕೂಡಲೇ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಉಪ್ಪಿನ ದಂಡಿ ಸತ್ಯಾ ಗ್ರಹದ ಮಾದರಿಯಲ್ಲಿಯೇ ದೇಶೀಯ ಬೀಜ ಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡು ವುದು ಅನಿವಾರ್ಯವಾಗುತ್ತದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವಕಾಶ ನೀಡದೆ ರೈತರ ಮನದಾಳವಲನ್ನು ಅರಿತುಕೊಳ್ಳ ಬೇಕೆಂದರು.ಕರ್ನಾಟಕವನ್ನು ಕುಲಾಂತರಿ ಮುಕ್ತ ರಾಜ್ಯ ಎಂದು ಘೋಷಿಸಬೇಕು. ಕುಲಾಂತರಿ ಬೀಜ ಗಳನ್ನು ರಾಜ್ಯದಿಂದ ಹೊರ ಹಾಕಲು ಕ್ರಮ ಕೈಗೊಳ್ಳ ಬೇಕು. ಸಾವಯವ ಕೃಷಿಗೆ ಹೆಚ್ಚಿನ ಆಧ್ಯತೆ ನೀಡಬೇಕು.ಬೀಜ ತಳಿಗಳ ಮೇಲೆ ರೈತರ ಹಕ್ಕನ್ನು ಎತ್ತಿ ಹಿಡಿಯಬೇಕು. ಬಹುರಾಷ್ಟ್ರೀಯ ಬೀಜ ಕಂಪೆನಿಗಳು ದುರಾಕ್ರಮಣ ಮುಕ್ತ ಗೊಳಿಸಬೇಕು ಹಾಗೂ ಸ್ಥಳೀಯ ಬೀಜಗಳ ಮೇಲೆ ಸ್ಥಳೀಯವಾಗಿ ಕೆಲಸ ಮಾಡಲು ಅನುಕೂಲ ಕಲ್ಪಿಸಿಕೊಡಬೇಕು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.ಕಾರ್ಯಕ್ರಮದಲ್ಲಿ ಮತ್ತೊಬ್ಬ ಮುಖಂಡ ಶಿವಯೋಗಿ ಮಕರಿ ಮಾತನಾಡಿ, ಕುಲಾಂತರಿ ಬೆಳೆಗಳು ಹಾಗೂ ಅವುಗಳೊಂದಿಗೆ ಬರುವ ಕಳೆ ನಾಶಕಗಳು ಹಕ್ಕಿಗಳು, ಕೀಟಗಳು, ಜಲಚರಗಳು ಮತ್ತು ಮಣ್ಣಿನ ಜೀವಿಗಳಿಗೆ ಮಾರಕ ವಾಗು ತ್ತವೆ. ಜೀವ ವೈವಿಧ್ಯ ನಾಶಕ್ಕೆ ಕಾರಣ ವಾಗುತ್ತದೆ. ನೀರಿನ ಸೆಲೆಗಳು ಮಲಿನ ಗೊಳ್ಳು ತ್ತವೆ. ಇಡೀ ಪರಿಸರ ವ್ಯವಸ್ಥೆ ಅಸ್ಥಿರ ಗೊಳ್ಳಲು ಕಾರಣವಾಗುತ್ತದೆ ಎಂದು ವಿವರಿಸಿದರು.ಈ ವೇಳೆ ಪ್ರಗತಿ ಪರ ರೈತರಾದ ನಾಗಪ್ಪ ನಿಂಬೆಗುಂದಿ, ಈಶ್ವರಪ್ಪ ಬಣಕಾರ, ಶ್ರೇಣಿಕರಾಜ್ ಯಳವತ್ತಿ, ತೋಟಪ್ಪ ಹಳ್ಳಿಕೇರಿ, ಶಂಕರಗೌಡ ಪಾಟೀಲ, ದಯಾನಂದ ಕಲಕೋಟಿ, ಚಂದ್ರಕಾಂತ ಸಂಗೂರು, ಶಶಿಧರ ಡೊಂಕಣ್ಣನವರ, ಚಂದ್ರಶೇಖರ ಕನವಳ್ಳಿ ಮತ್ತಿತರರು ಹಾಜರಿದ್ದರು.ಜಾಥಾದಲ್ಲಿ ರಾಜ್ಯದಲ್ಲಿ ಬೀಜ ಪರಂಪರೆ, ವೈವಿಧ್ಯಮಯ ಕೃಷಿ ಪದ್ಧತಿಯಿಂದ ವಿಮುಖರಾಗುತ್ತಿರುವ ರೈತರಿಗೆ ಮೂರು ದಿನಗಳ ಮಾರ್ಗದರ್ಶನ ನೀಡಲಾಯಿತು. ಕುಲಾಂತರಿ ಬೀಜ ವಿರುದ್ಧ ಆಯೋಜಿಸಲಾಗಿದ್ದ ಈ ಜಾಥಾಕ್ಕೆ ಅಭೂತಪೂರ್ವ ಯಶಸ್ಸು ದೊರೆಯಿತೆಂದು ಕೊಂಬಳಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.