ಕುವೆಂಪು ಜೀವನ ಆದರ್ಶಪ್ರಾಯ

7

ಕುವೆಂಪು ಜೀವನ ಆದರ್ಶಪ್ರಾಯ

Published:
Updated:

ಶ್ರೀನಿವಾಸಪುರ: ಕುವೆಂಪು ಅವರ ಜೀವನ ಆದರ್ಶಪ್ರಾಯವಾದುದು. ಅವರ ವಿಚಾರ ಹಾಗೂ ಆಚಾರ­ಗಳಲ್ಲಿ ಉನ್ನತ ಭಾವನೆಗಳಿದ್ದವು. ಅವರು ವಿಶ್ವಮಾನವರಾಗಿ ಕನ್ನಡಕ್ಕೆ ವಿಶೇಷ ಘನತೆ ತಂದುಕೊಟ್ಟರು ಎಂದು ಭೈರವೇಶ್ವರ ವಿದ್ಯಾನಿಕೇತನದ ಆಡಳಿತಾಧಿಕಾರಿ ಪ್ರೊ. ಎಸ್‌.ಮುನಿರೆಡ್ಡಿ ಹೇಳಿದರು.  ಪಟ್ಟಣದ ವೆಂಕಟೇಶ್ವರ ಪ್ಯಾರಾ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಬುಧವಾರ ಏರ್ಪಡಿಸ­ಲಾಗಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಂಗೋತ್ರಿ ಕಾಲೇಜಿನ ಪ್ರಾಂಶು­ಪಾಲ ಟಿ.ಕೆ.ಪ್ರಭಾಕರ್‌ ಮಾತನಾಡಿ, ಕುವೆಂಪು ಪ್ರಕೃತಿಯ ಆರಾಧಕ­ರಾಗಿದ್ದರು. ಸುಂದರ ನಿಸರ್ಗವನ್ನು ಕಂಡಾಗ ಅವರ ನಿಧಾನಗತಿಯ ಮಾತು ಹೃದಯಕ್ಕೆ ಇಳಿಯುತ್ತಿತ್ತು. ತಮ್ಮ ವಿಚಾರಧಾರೆಯನ್ನು ಸಾಮಾ­ಜಿಕತೆಯ ಚಿಂತನೆಯತ್ತ ಹರಿಸು­ತ್ತಿದ್ದರು. ಸರಳ ವ್ಯಕ್ತಿತ್ವ ಹಾಗೂ ಸಜ್ಜ­ನಿಕೆಯಿಂದ ಎರನ್ನೂ ಆಕರ್ಷಸುತ್ತಿ­ದ್ದರು ಎಂದು ಹೇಳಿದರು.ವೇಣು ವಿದ್ಯಾಸಂಸ್ಥೆಯ ಆಡಳಿ­ತಾಧಿ­ಕಾರಿ ಎನ್.ಬಿ. ಗೋಪಾಲಗೌಡ,  ಶಿಕ್ಷಣ ಸಂಯೋಜಕ ಕೃಷ್ಣಮೂರ್ತಿ ಮಾತನಾಡಿದರು. ಕಶೆಟ್ಟಿಪಲ್ಲಿ ಉನ್ನತೀಕೃತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ವೇಣು, ಜಿ. ಕಿರಣ್ ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿಜೋಗಿ ಪದ್ಯದ ಆಯ್ದ ಭಾಗಗಳನ್ನು ಗಮಕ ಕಶೈಲಿಯಲ್ಲಿ ವಾಚಿಸಿದರು.

ಭೈರವೇಶ್ವರ ವಿದ್ಯಾನಿ­ಕೇತನದ ಗಗನ, ಮೃದುನ, ಆದರ್ಶ ಶಾಲೆಯ ಎಸ್‌.ಸಂದೀಪ್  ಮೌನೀಷ್, ಅರುಣ್, ಅಂಕಿತ, ರಕ್ಷಿತ, ಕುವೆಂಪು ರವರ ಕವಿತೆಗಳನ್ನು ಹಾಡಿ, ವಾಚನ ಮಾಡಿ ಗಮನ ಸೆಳೆದರು. ಗಾಯಕ ಕೆ.ನರಸಿಂಹಮೂರ್ತಿ ಅವರಿಂದ  ಕುವೆಂಪು ಅವರ ಆಯ್ದ ಕವಿತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಡಾ.ವೆಂಕಟಾಚಲ, ಸಾಹಿತ್ಯ ಪರಿ­ಷತ್ತಿನ ಗೌರವ ಕಾರ್ಯದರ್ಶಿ ಚಂದ್ರ­ಶೇಖರ್, ಅಧ್ಯಕ್ಷ ಮುನಿವೆಂಕಟೇ­ಗೌಡ, ಶಿಕ್ಷಕ ಚಲಪತಿ ಸಮಾರಂಭ­ದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry