ಕುವೆಂಪು ಮೈಸೂರು ಮನೆ ಅಭಿವೃದ್ಧಿಯಾಗಲಿ

7

ಕುವೆಂಪು ಮೈಸೂರು ಮನೆ ಅಭಿವೃದ್ಧಿಯಾಗಲಿ

Published:
Updated:

ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ್ದ ಇಂಗ್ಲಿಷ್ ಸಾಹಿತ್ಯ ದಿಗ್ಗಜ ಆರ್. ಕೆ. ನಾರಾಯಣ್ ಅವರ ಮೈಸೂರು ಮನೆಯನ್ನು ಸಾಂಸ್ಕೃತಿಕ ಕೇಂದ್ರವಾಗಿ ಸರ್ಕಾರವೇ ಮುಂದೆನಿಂತು ಅಭಿವೃದ್ಧಿಪಡಿಸಿರುವುದು ಶ್ಲಾಘನೀಯ.

 

ಅದೇ ರೀತಿ ಕನ್ನಡದ ಮಹಾಕವಿ ಕುವೆಂಪು ಅವರ ಮೈಸೂರು ಮನೆಯನ್ನು `ಆದರ್ಶ ಜೀವನ~ದ ಪ್ರೇರಣಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ.ಕುವೆಂಪು ಅವರ ಹುಟ್ಟೂರು ಕುಪ್ಪಳಿಯ ಮನೆಯನ್ನು ಸರ್ಕಾರ ಸ್ಮಾರಕವಾಗಿ ಅಭಿವೃದ್ಧಿ ಪಡಿಸಿದೆ.  ಅವರ ಮೈಸೂರಿನ ಮನೆ ಅವರ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿದ ತಾಣ. ಉದಯ ರವಿಯನ್ನು `ಜೀವನ ಪ್ರೇರಣಾ ಕೇಂದ್ರ~ವನ್ನಾಗಿ ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry