ಕುವೆಂಪು ವಿದ್ಯಾಸಂಸ್ಥೆ: ಕೊಠಡಿಗಳ ಉದ್ಘಾಟನೆ

5

ಕುವೆಂಪು ವಿದ್ಯಾಸಂಸ್ಥೆ: ಕೊಠಡಿಗಳ ಉದ್ಘಾಟನೆ

Published:
Updated:

ಸೋಮವಾರಪೇಟೆ: ತಾಲ್ಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವಮಾನವ ಕುವೆಂಪು ವಿದ್ಯಾ ಸಂಸ್ಥೆಯ ನೂತನ ಶಾಲಾ ಕೊಠಡಿಗಳನ್ನು ದಾನಿಗಳಾದ ಎ.ಆರ್. ಚಂಗಪ್ಪ, ಬಿ.ಎಂ. ಮಲ್ಲಯ್ಯ, ಎ.ಸಿ. ಸುದೀಪ್, ಜಗದೀಶ್, ಗಂಗಾಧರ್ ಹಾಗೂ ರಾಮಚಂದ್ರ ಅವರೇ ಭಾನುವಾರ ಉದ್ಘಾಟಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಒಕ್ಕಲಿಗರ ಸಂಘ ವಿದ್ಯಾ ಸಂಸ್ಥೆಯನ್ನು ನಡೆಸುತ್ತಿದೆ. ದಾನಿಗಳ ಸಹಕಾರದಿಂದ ಉತ್ತಮ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ದಾನಿಗಳಾದ ಭೋಜಮ್ಮ ಚಂಗಪ್ಪ, ಸವಿತಾಜಗದೀಶ್, ಸುನೀತ ಗಂಗಾಧರ್, ಚಂದ್ರಕಲಾ ರಾಮಚಂದ್ರ, ಜಯಮ್ಮ , ಸಂಸ್ಥೆಯ ಉಪಾಧ್ಯಕ್ಷ ಸಿ.ಕೆ. ರಾಘವ, ಖಜಾಂಚಿ ಸಿ.ಎಸ್. ಸುರೇಶ್, ವಿದ್ಯಾ ಸಂಸ್ಥೆಯ ಕರೆಸ್ಪಾಂಡೆಂಟ್ ಕೆ.ಎಸ್. ರಾಮಚಂದ್ರ ಇತರರು ವೇದಿಕೆಯಲ್ಲಿ ಇದ್ದರು.ಒಕ್ಕಲಿಗರ ಸಾಂಸ್ಕೃತಿಕ ಕಲಾಪ್ರಕಾರಗಳಲ್ಲಿ ಒಂದಾದ ಸುಗ್ಗಿ ಕುಣಿತದ ಮೂಲಕ ಅತಿಥಿಗಳನ್ನು ಸಮಾರಂಭಕ್ಕೆ ಕರೆತರಲಾಯಿತು. ವಿದ್ಯಾರ್ಥಿಗಳ ನೃತಯ ರಂಜಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry