ಕುವೆಂಪು ವಿವಿ ದೂರ ಶಿಕ್ಷಣ ಪರೀಕ್ಷಾ ಕೇಂದ್ರದ ಮೇಲೆ ದಾಳಿ

7

ಕುವೆಂಪು ವಿವಿ ದೂರ ಶಿಕ್ಷಣ ಪರೀಕ್ಷಾ ಕೇಂದ್ರದ ಮೇಲೆ ದಾಳಿ

Published:
Updated:

ಕೊಪ್ಪಳ: ಪರೀಕ್ಷಾ ಅಕ್ರಮ ಎಸಗುತ್ತಿದ್ದ ಇಲ್ಲಿನ ಕುಣಿಕೇರಿಯ ಹೇಮರೆಡ್ಡಿ ಮಲ್ಲಮ್ಮ ವಿದ್ಯಾ ಸಂಸ್ಥೆಯಲ್ಲಿನ ಕುವೆಂಪು ವಿವಿ ದೂರ ಶಿಕ್ಷಣ ಪರೀಕ್ಷಾ ಕೇಂದ್ರದ ಮೇಲೆ ಉಪವಿಭಾಗಾಧಿಕಾರಿ ಮಂಜುನಾಥ್‌ ನೇತೃತ್ವದಲ್ಲಿ ಭಾನುವಾರ ದಾಳಿ ನಡೆದಿದೆ.ನಿರಂತರ ಅಕ್ರಮಗಳು ಮುಂದುವರಿ­ದಿರುವುದು ಹಾಗೂ ಈ ಕುರಿತು ಮಾಧ್ಯ­ಮಗಳಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಪಿ. ಮೋಹ­ನರಾಜ್‌ ನಿರ್ದೇಶನದ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಉತ್ತರ ಪತ್ರಿಕೆ ವಶಪಡಿಸಿಕೊಂಡರು. ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ 26 ಮಂದಿಯ ಉತ್ತರ ಪತ್ರಿಕೆ ವಶಪಡಿ­ಸಿಕೊಂಡು ಅಲ್ಲಿನ ದಾಖಲಾತಿ ಪರಿ­ಶೀಲಿಸಿ ವಿವಿ ಮೇಲ್ವಿಚಾರಕರಿಗೆ ಹಸ್ತಾಂತರಿಸಿದರು.ಇಂಥ ಕೇಂದ್ರಗಳಲ್ಲಿ ನಿರಂತರ ಅಕ್ರಮಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಬಗ್ಗೆ ವಿವಿಗೆ ಮಾಹಿತಿ ನೀಡಲಾಗಿದೆ. ವಿವಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಉಳಿದಂತೆ ಕೇಂದ್ರ­ವನ್ನು ರದ್ದುಪಡಿಸುವುದು ಅಥವಾ ಕಾನೂನು ಕ್ರಮ ಜರುಗಿಸುವುದು ಜಿಲ್ಲಾಧಿಕಾರಿ ನಿರ್ಧಾರಕ್ಕೆ ಸಂಬಂಧಿಸಿದೆ ಎಂದು ಉಪವಿಭಾಗಾಧಿಕಾರಿ ಮಂಜುನಾಥ್‌ ತಿಳಿಸಿದರು. ವಾರ್ತಾಧಿಕಾರಿ ಬಿ.ವಿ.ತುಕಾರಾಮ್‌ ದಾಳಿ ಸಂದರ್ಭ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry