ಮಂಗಳವಾರ, ಮೇ 18, 2021
28 °C

ಕುವೈತ್: ವಿಕೃತಕಾಮಿಗೆ ಗಲ್ಲು ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುವೈತ್ ಸಿಟಿ (ಎಎಫ್‌ಪಿ): ಬಾಲಕ- ಬಾಲಕಿಯರು ಸೇರಿದಂತೆ ಹತ್ತು ವರ್ಷದೊಳಗಿನ 17 ಮಂದಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ವಿಕೃತ ಕಾಮುಕನೊಬ್ಬನನ್ನು ಕುವೈತ್ ಸರ್ಕಾರ ನೇಣಿಗೇರಿಸಿದೆ.ಹಜ್ಜಾಜ್ ಸಾದಿ (33) ಗಲ್ಲು ಶಿಕ್ಷೆಗೆ ಗುರಿಯಾದವನು. 

ಇದಕ್ಕೂ ಮುಂಚೆ ಐದು ಬಾರಿ ಮರಣ ದಂಡನೆ ಶಿಕ್ಷೆಗೊಳಗಾಗಿ ಈಜಿಪ್ಟ್‌ನಲ್ಲಿ ತಲೆಮರೆಸಿಕೊಂಡಿದ್ದ ಸಾದಿಯನ್ನು, ಈಜಿಪ್ಟ್ ಆಶ್ರಯ ನಿರಾಕರಿಸಿದ ಬೆನ್ನಲ್ಲೇ 2007ರಲ್ಲಿ ಇಲ್ಲಿನ ಲುಕ್ಸರ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೆಚ್ಚಾಗಿ ವಿದೇಶಿಯರೇ ನೆಲೆಸಿರುವ ರಾಜಧಾನಿ ಕುವೈತ್ ನಗರದ ಸಮೀಪವೇ ಇರುವ ಹವಾಲ್ಲಿ ಜಿಲ್ಲೆಯವನಾದ ಸಾದಿ `ರಾಕ್ಷಸೀ ವಿಕೃತಕಾಮಿ' ಎಂದೇ ಕುಖ್ಯಾತನಾಗಿದ್ದನಲ್ಲದೆ, ಮಕ್ಕಳಿಗೆ ಆಮಿಷ ತೋರಿಸಿ ಅಪಹರಿಸಿ ಅತ್ಯಾಚಾರ ಎಸಗುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮತ್ತೊಂದು ಪ್ರಕರಣ: ಏಷ್ಯಾ ಮೂಲದ ದಂಪತಿ ನೆಲೆಸಿದ್ದ ಅಪಾರ್ಟ್‌ಮೆಂಟ್‌ಗೆ ಬೆಂಕಿ ಹಚ್ಚಿ ಕೊಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈಜಿಪ್ಟ್ ಮೂಲದ ವ್ಯಕ್ತಿಯೊಬ್ಬನನ್ನು ನೇಣಿಗೇರಿಸಲಾಗಿದೆ. ಅಹಮದ್ ಅಬ್ದುಲ್‌ಸಲಾಂ ಅಲ್- ಬೈಲಿ ಎಂಬಾತ ಶಿಕ್ಷೆಗೆ ಗುರಿಯಾದವನು. ಅಹಮ್ಮದ್, 2008ರಲ್ಲಿ ಏಷ್ಯಾ ಮೂಲದ ದಂಪತಿ ನೆಲೆಸಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಸುಲಭವಾಗಿ ಹೊತ್ತಿಕೊಳ್ಳುವಂತಹ ವಸ್ತುಗಳನ್ನು ಸೇರಿಸಿ, ಬೆಂಕಿ ಹಚ್ಚಿ ದಂಪತಿಯನ್ನು ಹತ್ಯೆ ಮಾಡಿದ್ದ. ಅಲ್ಲದೆ, ಈಜಿಪ್ಟ್ ಮೂಲದ ದಂಪತಿಯನ್ನು ಇದೇ ರೀತಿ ಕೊಲ್ಲಲು  ಯತ್ನಿಸಿ ವಿಫಲನಾಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.