ಕುಶಾಲನಗರ: ಉಚಿತ ನೇತ್ರ ತಪಾಸಣಾ ಶಿಬಿರ

7

ಕುಶಾಲನಗರ: ಉಚಿತ ನೇತ್ರ ತಪಾಸಣಾ ಶಿಬಿರ

Published:
Updated:

ಕುಶಾಲನಗರ: ಕುಶಾಲನಗರ ಜೆಸಿಐ ಸಂಸ್ಥೆ ಮತ್ತು ವಾಸನ್ ಐಕೇರ್ ಆಸ್ಪತ್ರೆಗಳ ಸಹಯೋಗದಲ್ಲಿ ಗುರುವಾರ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.ಶಿಬಿರವನ್ನು ಕುಶಾಲನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಕೆ.ಎಲ್. ಗಣೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂತಹ ಸಂಘ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳನ್ನು ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುವಂತಾಗಬೇಕು ಎಂದರು.ಕುಶಾಲನಗರ ಜೆಸಿಐ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿದರು. ಶಿಬಿರದ ಆರಂಭದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಶಿಕ್ಷಕ ನಜೀರ್ ಮಾಸ್ಟರ್ ಅವರಿಗೆ ತಪಾಸಣೆ ಮಾಡಲಾಯಿತು.ವಾಸನ್ ಐಕೇರ್ ಆಸ್ಪತ್ರೆಯ ನೇತ್ರ ವೈದ್ಯ ಮಂಜೇಶ್ ಮತ್ತು ನಿದೀಶ್ ಅವರು ನೂರಾರು ರೋಗಿಗಳ ಕಣ್ಣಿನ ತಪಾಸಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಿಬಿರ ವ್ಯವಸ್ಥಾಪಕ ರೋಷನ್ ತಿಮ್ಮಯ್ಯ, ಜೆಸಿಐ ಪ್ರಧಾನ ಕಾರ್ಯದರ್ಶಿ ಮಧು ಎಚ್.ಎಸ್. ಕಾರ್ಯಕ್ರಮ ನಿರ್ದೇಶಕ ಬಾಲಕೃಷ್ಣ ರೈ, ಜೆಸಿಐ ವಲಯ ಕಾರ್ಯದರ್ಶಿ ರಾಜೇಂದ್ರ ಪದಾಧಿಕಾರಿಗಳಾದ ಚಂದ್ರಶೇಖರ್, ಅಮೃತರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry