ಬುಧವಾರ, ಏಪ್ರಿಲ್ 14, 2021
24 °C

ಕುಷ್ಟಗಿಯಲ್ಲಿ ಹಗಲು ದರೋಡೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಅಡುಗೆ ಅನಿಲ ಸಿಲಿಂಡರ್‌ಗಾಗಿ ಗ್ರಾಹಕರು ಜಿಲ್ಲೆಯಲ್ಲಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ಆದರೆ, ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಜೊತೆಗೆ ಕೆಲವು ಜನಪ್ರತಿನಿಧಿಗಳು ಕೈಗೊಂಡ ಕೆಲವು ಕಠಿಣ ಕ್ರಮಗಳ ಫಲವಾಗಿ ನಿಧಾನವಾಗಿ ಸಿಲಿಂಡರ್ ಸಮಸ್ಯೆ ಬಗೆಹರಿಯುತ್ತಿದೆ.ಆದರೆ, ಗ್ರಾಹಕರ ಅಮಾಯಕತನವನ್ನು ಹಾಗೂ ಏನೇ ಅಗಲಿ ಸಿಲಿಂಡರ್ ಸಿಕ್ಕರೆ ಸಾಕು ಎಂಬ ಅಸಹಾಯಕತೆಯನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಜಿಲ್ಲೆಯ ಕುಷ್ಟಗಿ ಪಟ್ಟಣದ ಅಡುಗೆ ಅನಿಲ ಸಿಲಿಂಡರ್‌ನ ಏಜೆನ್ಸಿ, ಗ್ರಾಹಕರಿಂದ ಅಗತ್ಯಕ್ಕಿಂತ ಹೆಚ್ಚಿನ ಹಣ ವಸೂಲು ಮಾಡುತ್ತಿದೆ.ಅಡುಗೆ ಅನಿಲ ಸಿಲಿಂಡರ್ ಪಡೆಯಲು 367 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಇನ್ನು ಗ್ರಾಹಕರು ಖುಷಿ ನೆಪದಲ್ಲಿ 5 ಇಲ್ಲವೇ 10 ರೂಪಾಯಿಗಳನ್ನು ಡೆಲಿವರಿ ಬಾಯ್‌ಗೆ ನೀಡುವುದು ಸಾಮಾನ್ಯ.ಆದರೆ, ಕುಷ್ಟಗಿಯಲ್ಲಿ ಮಾತ್ರ, ರೂ. 370 ಜೊತೆಗೆ ರೂ. 30 ಹೆಚ್ಚಿಗೆ ತೆಗೆದುಕೊಳ್ಳುವುದು ಯಾವ ನ್ಯಾಯ ಎಂದು ಗ್ರಾಹಕರು ಪ್ರಶ್ನಿಸುತ್ತಾರೆ.ಅಲ್ಲದೇ, ಈ ಮೊತ್ತವನ್ನು ಕೈಯಿಂದಲೇ ಬರೆದುಕೊಡುವ ಪರಿಪಾಠ ಇಲ್ಲಿದೆ. ಕಂಪ್ಯೂಟರ್ ಸಹಾಯದಿಂದ ಮುದ್ರಣ ಮಾಡಿದ ಬಿಲ್ ಕೊಡುವ ವ್ಯವಸ್ಥೆ ಏಕಿಲ್ಲ ಎಂದೂ ಜನರು ಪ್ರಶ್ನಿಸುತ್ತಾರೆ.ಸಂಬಂಧಪಟ್ಟ ಅಧಿಕಾರಿಗಳು ಈ ರೀತಿ ನಡೆಯುತ್ತಿರುವ ಸುಲಿಗೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸುವ ಜನರು, ತಪ್ಪಿದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.