ಗುರುವಾರ , ಮೇ 6, 2021
26 °C

ಕುಷ್ಟಗಿ:ಹದಗೆಟ್ಟ ರಾಜ್ಯಹೆದ್ದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಪಟ್ಟಣದಿಂದ ರಾಯಚೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಗುಮಗೇರಿ ಮತ್ತಿತರೆಡೆ ಹಾಳಾಗಿ  ಕಲ್ಲುಗಳು ಆವರಿಸಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿರುವುದು ಕಂಡುಬಂದಿದೆ.ಗೋವಾ, ಮಹಾರಾಷ್ಟ್ರ, ಹುಬ್ಬಳ್ಳಿ, ಬಿಜಾಪೂರ, ಹೈದರಾಬಾದ, ಬೀದರ, ಹೊಸಪೇಟೆ, ಮಂಗಳೂರು, ಮೊದಲಾದ ಪ್ರಮುಖ ಸ್ಥಳಗಳಿಗೆ ತೆರಳುವ ನೂರಾರು ವಾಹನಗಳು ನಿತ್ಯ ಇದೇ ಮಾರ್ಗವನ್ನು ಬಳಸಬೇಕಾಗುತ್ತದೆ. ಅಲ್ಲದೇ ಸ್ಥಳೀಯ ಜಿಲ್ಲೆ ಮತ್ತು ಸುತ್ತಲಿನ ತಾಲ್ಲೂಕುಗಳಿಂದ ಬರ ಹೋಗುವ ಪ್ರಯಾಣಿಕರಿಗೆ ಈ ರಸ್ತೆ ಅನುಕೂಲ ಕಲ್ಪಿಸುತ್ತದೆ.ಆದರೆ ಅನೇಕ ಕಡೆ ಈ ರಸ್ತೆ ಹದಗೆಟ್ಟುಹೋಗಿದೆ, ಅಲ್ಲಲ್ಲಿ ದಪ್ಪ ಗಾತ್ರದ ಕಲ್ಲುಗಳು ಮೇಲೆ ಬಂದಿವೆ. ಕಲ್ಲುಗಳ ಮೇಲೆ ವಾಹನ ಹೋದಾಗ ಟೈರ್‌ಗಳು ಹಾಳಾಗುವುದಲ್ಲದೇ ಚಕ್ರದಡಿ ಸಿಕ್ಕ ಕಲ್ಲುಗಳು ಅಕ್ಕಪಕ್ಕದಲ್ಲಿದ್ದವರಿಗೆ ಬಡಿಯುತ್ತವೆ. ದ್ವಿಚಕ್ರ ಸವಾರರ ಗೋಳಂತೂ ಹೇಳತೀರದಂತಾಗಿದೆ ಎಂದು ಜನ ದೂರಿದ್ದಾರೆ.ಸದರಿ ರಸ್ತೆಗೆ ಈ ದುರ್ಗತಿ ಬಂದು ಕೆಲ ವರ್ಷಗಳು ಕಳೆದಿವೆ, ಆದರೆ ಅದನ್ನು ದುರಸ್ತಿಗೊಳಿಸಿಲ್ಲ, ಲೋಕೋಪಯೋಗಿ ಇಲಾಖೆಗೆ ಸೇರಿದ್ದರೂ ರಸ್ತೆ ಅಭವೃದ್ಧಿಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಹಗಲಿನಲ್ಲಿಯೇ ರಸ್ತೆಯಲ್ಲಿ ಹೋಗುವುದು ದುಸ್ತರ.

 

ಇನ್ನು ರಾತ್ರಿ ವೇಳೆಯಲ್ಲಿ ವಾಹನ ಸವಾರರು ಬಹಳಷ್ಟು ಕಷ್ಟ ಅನುಭವಿಸಬೇಕಾಗುತ್ತದೆ, ಸರ್ಕಾರಕ್ಕೆ ಯಾರೂ ಹೇಳುವವರು ಕೇಳುವವರು ಇಲ್ಲವೆ? ಎಂದು ನಿತ್ಯವೂ ಇದೇ ಮಾರ್ಗದಲ್ಲಿ ಬಂದು ಹೋಗುವ ಸಿಂಧನೂರಿನ ಕೃಷ್ಣಾರೆಡ್ಡಿ, ಗಜೇಂದ್ರಗಡದ ಹನುಮಂತಗೌಡ ಮತ್ತಿತರರು ಅಳಲು ತೋಡಿಕೊಂಡರು.ಅಲ್ಲದೇ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಹಿರಿ ಕಿರಿ ಚುನಾಯಿತ ಪ್ರತಿನಿಧಿಗಳು ದಿನವೂ ಈ ರಸ್ತೆಯಲ್ಲೇ ಸಂಚರಿಸುತ್ತಿರುತ್ತಾರೆ, ಆದರೆ ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಜನ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.