ಕುಷ್ಠರೋಗ ನಿರ್ಮೂಲನಾ ಜಾಗೃತಿ ಜಾಥಾ

7

ಕುಷ್ಠರೋಗ ನಿರ್ಮೂಲನಾ ಜಾಗೃತಿ ಜಾಥಾ

Published:
Updated:

ಬೀದರ್: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ನಗರದಲ್ಲಿ ಜಾಗೃತಿ ಜಾಥಾ ನಡೆಯಿತು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿತೇಂದ್ರ ನಾಯಕ್ ಉದ್ಘಾಟಿಸಿದರು.ಕುಷ್ಠರೋಗದ ಕುರಿತಾಗಿ ಸಮಾಜದಲ್ಲಿ ಇರುವ ಮೂಢನಂಬಿಕೆ ತೊಲಗಬೇಕಿದೆ. ಇದಕ್ಕಾಗಿ ಇಂಥ ಜಾಗೃತಿ ಕಾರ್ಯಕ್ರಮಗಳು ಪೂರಕವಾಗಿದೆ. ಕುಷ್ಟರೋಗ ಸಂಪೂರ್ಣವಾಗಿ ಗುಣಮುಖ ಮಾಡಲು ಸಾಧ್ಯವಿರುವ ರೋಗವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಟರೋಗ ಅಧಿಕಾರಿಗಳ ಕಾರ್ಯಾಲಯದಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು. ಜಿಲ್ಲಾ ಕುಟುಂಬ ಕಲ್ಯಾಣ ಹಾಗೂ ಆರೋಗ್ಯ ಅಧಿಕಾರಿ ಡಾ. ಸತೀಶ ಏಖ್ಖೆಳ್ಳಿಕರ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕುಷ್ಟರೋಗ ಮಾಸಾಚರಣೆ ಕುರಿತು ಜಿಲ್ಲಾ ಕುಷ್ಟರೋಗ ಅಧಿಕಾರಿ ಡಾ. ನಾಗಭೂಷಣ ಸುಲಗಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಕುಷ್ಟರೋಗ ಅಧಿಕಾರಿ ಸತ್ಯಪ್ಪ ಸ್ವಾಗತಿಸಿದರು.ಡಾ. ಖಾಶೆಂಪುರಕರ್, ಡಾ. ರವಿ ಸಿರ್ಸೆ, ಡಾ. ಶಿವಶಂಕರ್, ಡಾ. ಅನಿಲ ಚಿಂತಾಮಣಿ, ಬಸವರಾಜ ಬುಳ್ಳಾ, ಅಂಬುದಾಸ್ ಮೋರೆ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry