`ಕುಸನೂರರ ಕಥೆ, ಮೌಲ್ಯಗಳ ಸೆಲೆ'

ಸೋಮವಾರ, ಜೂಲೈ 22, 2019
26 °C

`ಕುಸನೂರರ ಕಥೆ, ಮೌಲ್ಯಗಳ ಸೆಲೆ'

Published:
Updated:

ಗುಲ್ಬರ್ಗ: ಹಿರಿಯ ಸಾಹಿತಿ ಚಂದ್ರಕಾಂತ ಕುಸನೂರ ಅವರು ಬರೆದ ಕಥೆಗಳು ಈ ಭಾಗದ ಜನ ಜೀವನ, ಸಂಸ್ಕೃತಿಯನ್ನು ಪರಿಚಯಿಸುವುದರೊಂದಿಗೆ ಮಾನವೀಯ ಮೌಲ್ಯಗಳಿಗೆ ಸೆಲೆಯಾಗಿವೆ ಎಂದು ರಂಗಕರ್ಮಿ ಶಂಕ್ರಯ್ಯ ಘಂಟಿ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಗುಲ್ಬರ್ಗ ಉತ್ತರ ವಲಯ ಘಟಕವು ವಕೀಲ ಗಣಪತಿ ಕೋಡ್ಲೆ ಅವರ ನಿವಾಸದಲ್ಲಿ ಸೋಮವಾರ ಏರ್ಪಡಿಸಿದ್ದ `ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ಕುಸನೂರ ಅವರ `ತುಕ್ಕಪ್ಪ ಮಾಸ್ತರ' ಕಥಾ ಸಂಕಲನ ಕುರಿತು                ಮಾತನಾಡಿದರು.ಈ ಭಾಗದ ಭಾಷೆಯ ಬಗ್ಗೆ ಅಷ್ಟೊಂದು ಒಲುಮೆ ಕಥಾ ಸಂಕಲನದಲ್ಲಿ ಕಂಡು ಬರುವುದಿಲ್ಲ. ಆದರೆ ಬ್ರಾಹ್ಮಣ್ಯವನ್ನು ಮೀರಿ ನಿಲ್ಲುವ ಅನೇಕ ವಿಚಾರಗಳನ್ನು ಕೃತಿಯನ್ನು ಅಚ್ಚುಕಟ್ಟಾಗಿ ದಾಖಲಿಸಿರುವುದು ಗಮನಾರ್ಹ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಕಾಶಿನಾಥ ಅಂಬಲಗಿ, `ಬದುಕಿಗೆ ಹತ್ತಿರವಾದ ಕಥೆ, ಕಾವ್ಯ ರಚಿಸಿದಾಗ ಸಹಜವಾಗಿ ಜನರು ಅದನ್ನು ನೆನಪಿನಲ್ಲಿ ಉಳಿಸಿಕೊಳ್ಳುತ್ತಾರೆ. ಕುಸನೂರ ಅವರ ಕಥಾ ಸಂಕಲನವು ಈ ನಿಟ್ಟಿನಲ್ಲಿ ನಾಡಿನ ಪ್ರಮುಖ ಕೃತಿಗಳಲ್ಲೊಂದಾಗಿದೆ' ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಅಧ್ಯಕ್ಷತೆ ವಹಿಸಿದ್ದರು. ಉತ್ತರ ವಲಯ ಘಟಕದ ಅಧ್ಯಕ್ಷ ನಾಮದೇವ ರಾಠೋಡ ಪ್ರಾಸ್ತಾವಿಕ ಮಾತನಾಡಿದರು.ಗೌರವ ಕಾರ್ಯದರ್ಶಿ ರಾಜಶೇಖರ ಮಾಂಗ ನಿರೂಪಿಸಿದರು. ಪ್ರೇಮಾನಂದ ಚಿಂಚೋಳಿಕರ್ ಸ್ವಾಗತಿಸಿದರು. ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ವಂದಿಸಿದರು.ಡಾ. ಮೀನಾಕ್ಷಿ ಬಾಳಿ, ಡಾ. ಪ್ರಭು ಖಾನಾಪುರೆ, ಶಿವಶರಣ ಮೂಳೆಗಾಂವ, ಸಂಧ್ಯಾ ಹೊನಗುಂಟಿಕರ, ಲಕ್ಷ್ಮೀ ಶಂಕರ ಜೋಶಿ, ಶಂಕರ ಬಿರಾದಾರ, ಬಸವರಾಜ ಪಾಟೀಲ, ರಾಘವೇಂದ್ರಗೌಡ, ರಘುನಂದನ, ಡಾ. ಶರಣಪ್ಪ ಸೈದಾಪುರ, ಶರಣು ಆತನೂರ, ವಿಜಯಕುಮಾರ ಪೋಮಾಜಿ ಮತ್ತಿತರರು ಕಥಾ ಸಂಕಲನ ಸಂವಾದದಲ್ಲಿ  ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry