ಕುಸಿತ ಕಂಡ ಆಹಾರ ಹಣದುಬ್ಬರ

7

ಕುಸಿತ ಕಂಡ ಆಹಾರ ಹಣದುಬ್ಬರ

Published:
Updated:
ಕುಸಿತ ಕಂಡ ಆಹಾರ ಹಣದುಬ್ಬರ

ನವದೆಹಲಿ (ಪಿಟಿಐ): ಮೂರು ವಾರಗಳ ಸತತ ಏರಿಕೆಗೆ ಕೊನೆಹಾಡಿರುವ ಆಹಾರ ಹಣದುಬ್ಬರವು, ಜನವರಿ 22ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಏಳು ವಾರಗಳ ಹಿಂದಿನ ಮಟ್ಟಕ್ಕೆ (ಶೇ 13.07) ಕುಸಿದಿದೆ.

ಆಲೂಗಡ್ಡೆ ಮತ್ತು ಬೇಳೆಕಾಳು ಬೆಲೆ ಅಗ್ಗವಾಗಿರುವುದರಿಂದ ಆಹಾರ ಹಣದುಬ್ಬರವು ಶೇ 17.05ರಿಂದ ಶೇ 4ರಷ್ಟು ಕಡಿಮೆಯಾಗಿದೆ. ಒಂದು ವರ್ಷದ ಹಿಂದೆ ಇದು ಶೇ 22.08ರಷ್ಟಿತ್ತು. 2010ರ ಡಿಸೆಂಬರ್ 11ಕ್ಕೆ  ಶೇ 12.13ರಷ್ಟಿತ್ತು. ಗೋಧಿ ಮತ್ತು ಬೇಳೆಕಾಳು ಉತ್ಪಾದನೆ ಗರಿಷ್ಠ ಮಟ್ಟದಲ್ಲಿ ಇರಲಿರುವುದರಿಂದ ಹಣದುಬ್ಬರವು ಇನ್ನಷ್ಟು ಇಳಿಯುವ ನಿರೀಕ್ಷೆ ಇದೆ ಎಂದೂ  ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ವಾರಗಳಲ್ಲಿ ಆಹಾರ ಪದಾರ್ಥಗಳ ಅದರಲ್ಲೂ ವಿಶೇಷವಾಗಿ ಧಾನ್ಯಗಳ ಬೆಲೆಗಳು ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಗಳು ಇವೆ ಎಂದು ಕ್ರೈಸಿಲ್‌ನ ಮುಖ್ಯ ಆಆರ್ಥಿಕ ತಜ್ಞ ಡಿ. ಕೆ. ಜೋಷಿ ಹೇಳಿದ್ದಾರೆ.

ಹಣದುಬ್ಬರ ತಡೆಗಟ್ಟುವ ಉದ್ದೇಶದ ‘ಆರ್‌ಬಿಐ’ನ ಕಠಿಣ ಹಣಕಾಸು ನೀತಿ ಮೇಲೆಯೂ ಇದು ಪ್ರಭಾವ ಬೀರುವ ಸಾಧ್ಯತೆಗಳು ಕಡಿಮೆ ಇವೆ.  ಡಿಸೆಂಬರ್‌ನಲ್ಲಿ ಈ ಹಣದುಬ್ಬರವು ಶೇ 8.43ರಷ್ಟಿತ್ತು. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಗರಿಷ್ಠ ಮಟ್ಟದಲ್ಲಿ ಇರುವ ಕಚ್ಚಾ ತೈಲದ ಬೆಲೆಯು ಹಣದುಬ್ಬರವು ಗರಿಷ್ಠ ಮಟ್ಟದಲ್ಲಿಯೇ ಇರಲು ಕಾರಣವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry