ಕುಸಿತ ಕಂಡ ದಕ್ಷಿಣ ವಲಯ

7

ಕುಸಿತ ಕಂಡ ದಕ್ಷಿಣ ವಲಯ

Published:
Updated:

ವಿಶಾಖಪಟ್ಟಣ (ಪಿಟಿಐ): ದಕ್ಷಿಣ ವಲಯ ತಂಡ ಇಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕಿಟ್ ಟೂರ್ನಿಯ  ಸೆಮಿಫೈನಲ್ ಪಂದ್ಯದಲ್ಲಿ ಪೂರ್ವ ವಲಯ ಎದುರು ಕುಸಿತ ಕಂಡಿದೆ.ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ವಲಯ 48 ಓವರ್‌ಗಳಲ್ಲಿ 5 ವಿಕೆಟ್‌ಗೆ 134 ರನ್ ಗಳಿಸಿತ್ತು. ಇನಿಂಗ್ಸ್ ಮುನ್ನಡೆ ಗಳಿಸಲು ತಂಡಕ್ಕೆ ಇನ್ನೂ 134 ರನ್ ಗಳಿಸಬೇಕಿದೆ.ಇದಕ್ಕೂ ಮುನ್ನ 6 ವಿಕೆಟ್‌ಗೆ 187 ರನ್‌ಗಳಿಂದ ಆಟ ಮುಂದುವರಿಸಿದ ಪೂರ್ವ ವಲಯ ಮೊದಲ ಇನಿಂಗ್ಸ್‌ನಲ್ಲಿ 267 ರನ್ ಗಳಿಸಿತು. ಸೌರಭ್ ತಿವಾರಿ (145) ಶತಕ ಪೂರೈಸಿದರು. ಅಭಿಮನ್ಯು ಮಿಥುನ್ (68ಕ್ಕೆ 4) ಮತ್ತು ಸ್ಟುವರ್ಟ್ ಬಿನ್ನಿ (46ಕ್ಕೆ 3) ದಕ್ಷಿಣ ವಲಯ ಬೌಲರ್‌ಗಳಲ್ಲಿ ಮಿಂಚಿದರು.ಸಂಕ್ಷಿಪ್ತ ಸ್ಕೋರು: ಪೂರ್ವ ವಲಯ:
ಮೊದಲ ಇನಿಂಗ್ಸ್ 106.3 ಓವರ್‌ಗಳಲ್ಲಿ 267 (ಸೌರಭ್ ತಿವಾರಿ 145, ಬಸಂತ್ ಮೊಹಂತಿ 58, ಅಭಿಮನ್ಯು ಮಿಥುನ್ 68ಕ್ಕೆ 4, ಸ್ಟುವರ್ಟ್ ಬಿನ್ನಿ 46ಕ್ಕೆ 3, ಆರ್. ವಿನಯ್ ಕುಮಾರ್ 45ಕ್ಕೆ1, ಕೆ.ಪಿ. ಅಪ್ಪಣ್ಣ 40ಕ್ಕೆ 1). ದಕ್ಷಿಣ ವಲಯ: ಮೊದಲ ಇನಿಂಗ್ಸ್: 48 ಓವರ್‌ಗಳಲ್ಲಿ 5 ವಿಕೆಟ್‌ಗೆ 134 (ರಾಬಿನ್ ಉತ್ತಪ್ಪ 40, ಮನೀಷ್ ಪಾಂಡೆ 31, ಅಮಿತ್ ವರ್ಮಾ ಬ್ಯಾಟಿಂಗ್ 22, ಸಿ.ಎಂ. ಗೌತಮ್ ಬ್ಯಾಟಿಂಗ್ 8, ವಿಪ್ಲವ್ ಸಮಂತ್‌ರಾಯ್ 22ಕ್ಕೆ 3).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry