ಬುಧವಾರ, ಜೂನ್ 16, 2021
22 °C

ಕುಸಿದು ಬಿದ್ದು ಮೃತಪಟ್ಟ ವೆಂಕಟೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಸಿದು ಬಿದ್ದು ಮೃತಪಟ್ಟ ವೆಂಕಟೇಶ್

ಬೆಂಗಳೂರು: ಅಪಾರ ಕನಸು ಹೊತ್ತು ಕಣಕ್ಕಿಳಿದಿದ್ದ ಫುಟ್‌ಬಾಲ್ ಆಟಗಾರ ವೆಂಕಟೇಶ್ (23) ಆಡುತ್ತಲೇ ಸಾವನ್ನಪ್ಪಿದ್ದಾರೆ. ಅಶೋಕನಗರದ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ `ಎ~ ಡಿವಿಷನ್ ಫುಟ್‌ಬಾಲ್ ಲೀಗ್ ಟೂರ್ನಿಯ ವೇಳೆ ಈ ದುರಂತ ನಡೆದಿದೆ.

 

ಬುಧವಾರ ಮಧ್ಯಾಹ್ನ ಎಸ್‌ಡಬ್ಲ್ಯುಆರ್ ತಂಡದ ಎದುರು ಆಡುತ್ತಿದ್ದ ಬೆಂಗಳೂರು ಮಾರ್ಸ್‌ ತಂಡದ ವೆಂಕಟೇಶ್ ಪಂದ್ಯದ 78ನೇ ನಿಮಿಷದಲ್ಲಿ ಕುಸಿದು ಬಿದ್ದರು.ತಕ್ಷಣ ಅವರನ್ನು ಆಟೋದಲ್ಲಿ ಸನಿಹ ಇರುವ ಹಾಸ್‌ಮಟ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ `ವೆಂಕಟೇಶ್ ಮೃತಪಟ್ಟಿದ್ದಾರೆ~ ಎಂದು ಅಲ್ಲಿನ ವೈದ್ಯರು ಪ್ರಕಟಿಸಿದರು.ಅವರ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಅದರ ವರದಿ ಇನ್ನೂ ಬಂದಿಲ್ಲ. `ಇದೊಂದು ಸಹಜ ಸಾವು~ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಕೆಲ ಮೂಲಗಳ ಪ್ರಕಾರ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬುದು ತಿಳಿದು ಬಂದಿದೆ.
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.