ಗುರುವಾರ , ಮೇ 13, 2021
39 °C

ಕುಸಿದ ಅರ್ಥವ್ಯವಸ್ಥೆ: ಗೋದ್ರೇಜ್ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಐಎಎನ್‌ಎಸ್): ಭ್ರಷ್ಟಾಚಾರ, ಕುಸಿದಿರುವ ಆಡಳಿತ ಯಂತ್ರ ಮತ್ತು ಸುಧಾರಣೆಗಳ ಕೊರತೆಯಿಂದಾಗಿ ದೇಶದ ಅರ್ಥವ್ಯವಸ್ಥೆ ಮತ್ತು ಉದ್ಯಮ ರಂಗ ಸದ್ಯ ಅತ್ಯಂತ ಕಷ್ಟದ ಸಮಯವನ್ನು ಎದುರಿಸುತ್ತಿದೆ ಎಂದು ಗೋದ್ರೇಜ್ ಸಮೂಹದ ಅಧ್ಯಕ್ಷ  ಆದಿ ಗೋದ್ರೇಜ್ ಅಭಿಪ್ರಾಯಪಟ್ಟಿದ್ದಾರೆ.ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ, `ದೇಶದ ಅರ್ಥವ್ಯವಸ್ಥೆ ತೀರಾ ಹದಗೆಟ್ಟಿದೆ. ಸುಧಾರಣೆ ಕೊರತೆಯಿಂದ ಉದ್ಯಮ ವಲಯ ಅತ್ಯಂತ ಕ್ಲಿಷ್ಟಕರ ಹಾದಿಯಲ್ಲಿದೆ~ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಈಗಿನ ಪರಿಸ್ಥಿತಿಗೆ ಹಲವು ಕಾರಣಗಳಿವೆ. ಭ್ರಷ್ಟಾಚಾರದ ಜತೆಗೆ, ಸುಧಾರಣೆ ತರುವಲ್ಲಿ ಸರ್ಕಾರದ ಇಚ್ಛಾಶಕ್ತಿ ಕೊರತೆ  ಕೂಡ ಉದ್ಯಮ ವಲಯಕ್ಕೆ ಹಿನ್ನಡೆ ಉಂಟುಮಾಡಿದೆ. ಕುಸಿದಿರುವ ಅರ್ಥವ್ಯವಸ್ಥೆಯನ್ನು ಮೇಲೆತ್ತಲು  ಸರ್ಕಾರ ಮತ್ತು ಉದ್ಯಮ ವಲಯ ಜತೆಯಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯ ಇದೆ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.