ಸೋಮವಾರ, ಜನವರಿ 20, 2020
29 °C

ಕುಸುಬಿ ಬೆಳೆಗೆ ಚುಕ್ಕೆ ರೋಗ: ಆತಂಕದಲ್ಲಿ ರೈತರು

ಪ್ರಜಾವಾಣಿ ವಾರ್ತೆ / ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಗಳ ಬೆಂಗಾ ವಲು ಬೆಳೆ ಎಂದೇ ಬಿಂಬಿತಗೊಂಡಿರುವ ಕುಸುಬಿ ಬೆಳೆಗೆ ಕಪ್ಪು ಚುಕ್ಕೆ ರೋಗ ವ್ಯಾಪಕವಾಗಿದೆ. ಪರಿಣಾಮ ಕುಸುಬಿ ಬೆಳೆ ಸಂರಕ್ಷಿಸಿಕೊಳ್ಳಲು ಕೃಷಿಕರ ಹರಸಾಹಸ ಪಡುವಂತಾಗಿದೆ.ರೈತರು ಅಲ್ಪ ಪ್ರಮಾಣದ ಮಳೆ ಯನ್ನೇ ನೆಚ್ಚಿಕೊಂಡು ಬೆಳೆದ ಕುಸುಬಿ ಯನ್ನು ಸೀರು ರೋಗ ಹಿಂಡೆ ಹಿಪ್ಪೆಯ ನ್ನಾಗಿಸಿದೆ.ರೋಣ ತಾಲ್ಲೂಕಿನಲ್ಲಿ ಒಟ್ಟು 1,28,235 ಹೆಕ್ಟೇರ್ ಕೃಷಿ ಸಾಗುವಳಿ ಕ್ಷೇತ್ರವಿದೆ. ಇದರಲ್ಲಿ 84,035 ಹೆಕ್ಟೇರ್ ಎರಿ ಪ್ರದೇಶವಿದೆ. 44,200 ಹೆಕ್ಟೇರ್ ಮಸಾರಿ (ಕೆಂಪು ಮಿಶ್ರಿತ ಜವಗು)  ಪ್ರದೇಶವಿದೆ. ಪ್ರಸಕ್ತ ವರ್ಷ 9,644 ಹೆಕ್ಟೇರ್‌ ಜೋಳ, 80 ಹೆಕ್ಟರ್‌ ಮೆಕ್ಕೆ ಜೋಳ, 1,210  ಹೆಕ್ಟೇರ್‌ ಗೋಧಿ, 43,929 ಹೆಕ್ಟೇರ್‌ ಕಡ್ಲಿ, 183 ಹೆಕ್ಟೇರ್‌ ಈರುಳ್ಳಿ, 10,243 ಹೆಕ್ಟೇರ್‌ ಸೂರ್ಯಕಾಂತಿ, 10,169 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾದ ಬೆಳೆಗಳನ್ನು ಜಾನುವಾರುಗಳಿಂದ ಸಂರಕ್ಷಿಸುವ ಉದ್ದೇಶದಿಂದ ರೋಣ ತಾಲ್ಲೂಕಿನಾ ದ್ಯಂತ ಪ್ರಸಕ್ತ ವರ್ಷ 2,103 ಹೆಕ್ಟೇರ್‌ ಪ್ರದೇಶದಲ್ಲಿ ಕುಸುಬಿ ಬೆಳೆಯಲಾಗಿದೆ.ಕಳೆದ ಮೂರು ವರ್ಷಗಳಿಂದ ಬರದಿಂದ ತತ್ತರಿಸಿ ಹೋಗಿದ್ದ ಕುಸುಬಿ ಬೆಳೆಗಾರರು ಪ್ರಸಕ್ತ ವರ್ಷ ತಾಲ್ಲೂಕಿ ನಾದ್ಯಂತ ಸುರಿದ 477 ಮಿಲಿ ಮೀಟರ್‌ ಮಳೆಯಿಂದಾಗಿ ಎಲ್ಲ ಹಿಂಗಾರು ಹಂಗಾ ಮಿನ ಪ್ರಮುಖ ವಾಣಿಜ್ಯ ಬೆಳೆಗಳು ಸಮೃದ್ಧವಾಗಿ ಬೆಳೆದು ಹಸಿರಿನಿಂದ  ಕಂಗೊಳಿಸುತ್ತಿವೆ. ಈ ಬೆಳೆಗಳ ಬೆಂಗಾ ವಲಿಗಿದ್ದ ಕುಸುಬಿ ಮಾತ್ರ ಸೀರು ರೋಗ ದಿಂದ ತತ್ತರಿಸಿರುವುದು ಕುಸುಬಿ ಬೆಳೆ ಗಾರ ಸಮೂಹವನ್ನು ಚಿಂತೆಗೀಡು ಮಾಡಿದೆ.ಬೆಲೆಯಲ್ಲಿ ಏರಿಳಿತವಿಲ್ಲ: ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಕಡಲೆ, ಗೋಧಿ, ಹತ್ತಿ, ಉಳ್ಳಾಗಡ್ಡಿ, ಜೋಳ, ಮೆಣಸಿನಕಾಯಿ, ಮೆಕ್ಕೆಜೋಳ, ಸೂರ್ಯಕಾಂತಿ ಬೆಳೆಗಳ ಬೆಲೆಗಳಲ್ಲಿ ಮಾರುಕಟ್ಟೆಯಲ್ಲಿ ಏರಿಳಿತಗಳಾಗುತ್ತವೆ. ಆದರೆ ಕುಸುಬಿಗೆ ಮಾರುಕಟ್ಟೆಯಲ್ಲಿ ಕುಸುಬಿ ಬೆಲೆ ಸದಾ ಸ್ಥಿರವಾಗಿರುತ್ತದೆ. ಹೀಗಾಗಿ ಈ ಬೆಳೆಯನ್ನು ಚಿಕ್ಕ ಹಿಡುವಳಿ ದಾರರು ಬೆಂಗಾವಲು ಬೆಳೆಯನ್ನಾಗಿ ಬೆಳೆದರೆ, ದೊಡ್ಡ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.ಈ ಬೆಳೆಗೆ ಕನಿಷ್ಠ ರೂ 2,000 ರಿಂದ ರೂ 3,000 ವರೆಗೆ ಬೆಲೆ ಇರುತ್ತದೆ. ಅಲ್ಲದೆ, ಈ ಬೆಳೆಗೆ ನುಸಿ ರೋಗವನ್ನು ಹೊರತು ಪಡಿಸಿದರೆ ಬೇರೆ ಕೀಟಬಾಧೆ ವಿರಳ. ಎಂಬ ಕಾರಣಕ್ಕೆ ಬೆಳೆಯನ್ನು ಕೃಷಿಕರು ಬೆಳೆಯಲು ಇಚ್ಛಿಸುತ್ತಾರೆ.ಪ್ರಸಕ್ತ ವರ್ಷ ಬಿತ್ತನೆ ಮಾಡಿದ 20ನೇ ದಿನಗಳಲ್ಲಿಯೇ ನಿರಂತರ ಸುರಿದ ಕುಂಭದ್ರೋಣ ಮಳೆಯ ಪರಿಣಾಮ ಕುಸುಬಿಗೆ ತೇವಾಂಶ ಹೆಚ್ಚಿತು. ಇದು ಸೀರು ರೋಗಕ್ಕೆ ಪ್ರಮುಖ ಕಾರಣ ವಾಯಿತು. ಜೊತೆಗೆ ಹವಾಮಾನ ವೈಪ ರೀತ್ಯ ನಿರಂತರವಾಗಿದ್ದರಿಂದ ರೋಗ ಮತ್ತಷ್ಟು ಉಲ್ಬಣಕ್ಕೆ ಕಾರಣ ವಾಯಿತು ಎನ್ನುತ್ತಾರೆ ಶರಣಪ್ಪ ತಳವಾರ.ಹತೋಟಿ ಕ್ರಮ: ಸೀರು ರೋಗ ನಿಯಂತ್ರಣಕ್ಕೆ 18 ಲೀಟರ್‌ ನೀರಿಗೆ 30 ಎಂ.ಎಲ್‌ ಡೈಮಿಟೋಯೇಟ್‌ ಟ್ರೋಗರ್‌ ಅಥವಾ ಪ್ರೋಪೊನಾಫಾಸ್‌ ರಾಸಾಯನಿಕವನ್ನು ಸಿಂಪಡಿಸಬೇಕು. ಇಳಿ ಬಿಸಿಲು ಮತ್ತು ತಂಪು ಇರುವ ವೇಳೆ ಸಿಂಪಡಿಸಬೇಕು. ಹೆಚ್ಚು ಬಿಸಿಲಿನಲ್ಲಿ ಸಿಂಪಡಿಸುವಂತಿಲ್ಲ.ಈ ವೇಳೆ ಕುಸುಬಿ ಬೆಳೆ ಹೂ ಹಂತದಲ್ಲಿರಬಾರದು. ಈ ಎಲ್ಲ ಕ್ರಮಗಳನ್ನು ಅನುಸರಿಸಿದರೆ ರೋಗ ನಿಯಂತ್ರಣ ಸಾಧ್ಯ ಎನ್ನುತ್ತಾರೆ ಸಹಾಯಕ ಕೃಷಿ ಅಧಿಕಾರಿ ವಿ.ಟಿ.ವಿರಕ್ತಮಠ, ಕೆ.ಎಚ್‌.ಗಂಗೂರ.

 

ಪ್ರತಿಕ್ರಿಯಿಸಿ (+)