ಕುಸ್ತಿಪಟುಗಳಿಗೆ ನಗದು ಬಹುಮಾನ

7

ಕುಸ್ತಿಪಟುಗಳಿಗೆ ನಗದು ಬಹುಮಾನ

Published:
Updated:

ನವದೆಹಲಿ (ಪಿಟಿಐ):  ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಅಮಿತ್‌ ಕುಮಾರ್‌, ಬಜರಂಗ್‌ ಹಾಗೂ ಸಂದೀಪ್‌ ತುಳಸಿ ಯಾದವ್‌ ಅವರಿಗೆ ನಗದು ಹಣ ನೀಡುವುದಾಗಿ ಭಾರತ ಕುಸ್ತಿ ಫೆಡರೇಷನ್‌ ಪ್ರಕಟಿಸಿದೆ.ಬುಧವಾರ ಇಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಈ ವಿಷಯ ತಿಳಿಸಿದೆ. ಬೆಳ್ಳಿ ಪದಕ ಗೆದ್ದ ಅಮಿತ್‌ (₨ 5 ಲಕ್ಷ), ಕಂಚಿನ ಪದಕ ಗೆದ್ದ ಬಜರಂಗ್‌ ಹಾಗೂ ಸಂದೀಪ್‌ (ತಲಾ ₨ 3 ಲಕ್ಷ) ಸದ್ಯದಲ್ಲಿ ಬಹುಮಾನದ ಹಣ ಪಡೆಯಲಿದ್ದಾರೆ.ಸಮಾರಂಭದಲ್ಲಿ ಸುಶೀಲ್‌ ಕುಮಾರ್‌ ಹಾಗೂ ಯೋಗೇಶ್ವರ್‌ ದತ್‌ ಕೂಡ ಇದ್ದರು. ‘2016ರ ಒಲಿಂಪಿಕ್ಸ್‌ನಲ್ಲಿ ಐದು ಪದಕ ಗೆಲ್ಲುವ ಗುರಿಯನ್ನು ನಮ್ಮ ಕುಸ್ತಿಪಟುಗಳು ಹೊಂದಿದ್ದಾರೆ’ ಎಂದು ಸುಶೀಲ್‌ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry