ಬುಧವಾರ, ಏಪ್ರಿಲ್ 21, 2021
27 °C

ಕುಸ್ತಿ: ಅಮಿತ್ ಕುಮಾರ್ ಕ್ವಾರ್ಟರ್ ಫೈನಲ್‌ಗೆ, ಯಾದವ್‌ಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್): ಒಲಿಂಪಿಕ್ಸ್‌ನಲ್ಲಿ ಶುಕ್ರವಾರ ನಡೆದ ಪುರುಷರ ಕುಸ್ತಿಯ 55ಕೆ.ಜಿ. ವಿಭಾಗದಲ್ಲಿ ಭಾರತದ ಕುಸ್ತಿಪಟು ಅಮಿತ್ ಕುಮಾರ್ ದಹಿಯಾ ಅವರು ಇರಾನ್‌ನ ಹಸನ್ ಸಬ್ಜ್‌ಲಿ ರಹಿಮಿ ಅವರನ್ನು ಮಣಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, 74 ಕೆ.ಜಿ. ವಿಭಾಗದಲ್ಲಿ ಅಖಾಡಕ್ಕಿಳಿದಿದ್ದ ಇನ್ನೊಬ್ಬ ಪಟು ನರಸಿಂಗ್ ಪಂಚಮ್ ಯಾದವ್ ಅವರು ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದರು.ಎಕ್ಸ್‌ಸೆಲ್ ಅರೆನಾ 2ರಲ್ಲಿ ನಡೆದ ಪಂದ್ಯದಲ್ಲಿ ಮೊದಲ ಸುತ್ತಿನಲ್ಲಿ ಬೈ ಪಡೆದ ಅಮಿತ್ ಕುಮಾರ್ ಅವರು ಎರಡನೇಯ ಸುತ್ತಿನಲ್ಲಿ ರಹಿಮಿ ಅವರನ್ನು ತಮ್ಮ ಚಾಕ್ಯಚಕತೆಯ ಮೂಲಕ ಚಿತ್ ಮಾಡಿ 3-1 ಪಾಯಿಂಟ್‌ಗಳಿಂದ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದರು.

 

ಅದೇ ರೀತಿ ಕೆನಡಾದ ಮ್ಯಾಥ್ಯೂ ಜುದಹ್ ಜೆಂಟ್ರಿ ಅವರೊಂದಿಗೆ ಕಣಕ್ಕಿಳಿದ ನರಸಿಂಗ್ ಪಂಚಮ್ ಯಾದವ್ ಅವರು ಮೊದಲ ಸುತ್ತಿನಲ್ಲೆ ಜೆಂಟ್ರಿ ಅವರು ಹಾಕಿದ ಚಿತ್‌ಗೆ ಶರಣಾದರು.ಕ್ವಾರ್ಟರ್ ಫೈನಲ್‌ನಲ್ಲಿ ಬಲ್ಗೇರಿಯಾದ ರ‌್ಯಾಡೊಸ್ಲ್ಯಾವ್ ಮರಿನೊವ್ ವೆಲಿಕೊವ್ ಹಾಗೂ ಜಾರ್ಜಿಯಾದ ವಾಡ್ಲಿಮಿರ್ ಖಿಂಚೆಗ್ಯಾಸಿವಿಲಿ ಅವರು ಸೆಣಸಲಿದ್ದು, ಅವರಲ್ಲಿ ವಿಜೆತರಾದವರನ್ನು ಅಮಿತ್ ಎದುರಿಸಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.