ಕುಸ್ತಿ: ಆಯ್ಕೆ ಟ್ರಯಲ್ಸ್

7

ಕುಸ್ತಿ: ಆಯ್ಕೆ ಟ್ರಯಲ್ಸ್

Published:
Updated:

ಬೆಂಗಳೂರು: ಜಾರ್ಖಂಡ್‌ನಲ್ಲಿ ಏಪ್ರಿಲ್ 5 ರಿಂದ 8ರ ವರೆಗೆ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಕರ್ನಾಟಕ ಬಾಲಕ ಮತ್ತು ಬಾಲಕಿಯರ ತಂಡಗಳ ಆಯ್ಕೆ ಟ್ರಯಲ್ಸ್ ಮಾರ್ಚ್ 2 ರಿಂದ 5ರ ವರೆಗೆ ನಡೆಯಲಿದೆ.ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಮಾ. 2 ರಿಂದ 5ರ ವರೆಗೆ ನಡೆಯುವ `ಕರ್ನಾಟಕ ಬಾಲಕೇಸರಿ~, `ಮಹಾನ್ ಭಾರತ್ ಕೇಸರಿ~ ಮತ್ತು `ಕರ್ನಾಟಕ ಕೇಸರಿ~ ಕುಸ್ತಿ ಚಾಂಪಿಯನ್‌ಷಿಪ್ ವೇಳೆ ಆಯ್ಕೆ ಟ್ರಯಲ್ಸ್ ನಡೆಯಲಿದೆ ಎಂದು ಕರ್ನಾಟಕ ಕುಸ್ತಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಜನನ ಪ್ರಮಾಣಪತ್ರವನ್ನು ತರಬೇಕು. ಹೆಚ್ಚಿನ ಮಾಹಿತಿಗೆ ಎನ್.ಆರ್. ನರಸಿಂಹ (ಪ್ರಧಾನ ಕಾರ್ಯದರ್ಶಿ, 9844123303) ಅವರನ್ನು ಸಂಪರ್ಕಿಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry