ಭಾನುವಾರ, ಮೇ 16, 2021
28 °C

ಕುಸ್ತಿ: ಕರ್ನಾಟಕ ತಂಡ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೊಲ್ಲಾಪುರದಲ್ಲಿ ಏಪ್ರಿಲ್ 19ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ 46ನೇ ಭಾರತೀಯ ಶೈಲಿ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ಗೆ (ಹಿಂದ್ ಕೇಸರಿ) ಕರ್ನಾಟಕದ ತಂಡವನ್ನು ನಗರದಲ್ಲಿ ಮಂಗಳವಾರ ಆಯ್ಕೆ ಮಾಡಲಾಯಿತು.ಭಾರತೀಯ ಶೈಲಿ ಕುಸ್ತಿ ಸಂಘದ ಕರ್ನಾಟಕ ಘಟಕದ ಆಶ್ರಯದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಹಿಂದ್ ಕೇಸರಿ ಸ್ಪರ್ಧೆಯ 84 ಕೆ.ಜಿ. ವಿಭಾಗಕ್ಕೆ ಬೆಳಗಾವಿಯ ಕ್ರೀಡಾ ವಸತಿನಿಲಯದ ಪ್ರಶಾಂತ ಪಾಟೀಲ, 74 ಕೆ.ಜಿ. ವಿಭಾಗಕ್ಕೆ ನಗರದ ಕ್ರೀಡಾ ವಸತಿನಿಲಯದ ನಿಶಾಂತ ಪಾಟೀಲ, 66 ಕೆ.ಜಿ. ವಿಭಾಗಕ್ಕೆ ಬೆಳಗಾವಿಯ ಹರಿಶ್ಚಂದ್ರ ಕಾನೂರಕರ, 60 ಕೆ.ಜಿ. ವಿಭಾಗಕ್ಕೆ ಜಮಖಂಡಿಯ ಆರ್.ಆರ್. ಅಖಾಡಾದ ಸಂಜಯ ಇ. ಹಾಗೂ 55 ಕೆ.ಜಿ. ವಿಭಾಗಕ್ಕೆ ಬೆಳಗಾವಿಯ ಕ್ರೀಡಾ ವಸತಿನಿಲಯದ ವಿನಾಯಕ ಗುರವ ಅವರನ್ನು ಆಯ್ಕೆ ಮಾಡಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.