ಕುಸ್ತಿ: ಕಾರ್ತಿಕ `ಕನ್ನಡ ಸಂಘ ಕೇಸರಿ'

7

ಕುಸ್ತಿ: ಕಾರ್ತಿಕ `ಕನ್ನಡ ಸಂಘ ಕೇಸರಿ'

Published:
Updated:
ಕುಸ್ತಿ: ಕಾರ್ತಿಕ `ಕನ್ನಡ ಸಂಘ ಕೇಸರಿ'

ಜಮಖಂಡಿ: ದಾವಣಗೆರೆಯ ಕಾರ್ತಿಕ ಕಾಟೆ ಅವರು ರಾಜ್ಯೋತ್ಸವ ಅಂಗವಾಗಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ  `ಕನ್ನಡ ಸಂಘ ಕೇಸರಿ' ಪ್ರಶಸ್ತಿ ಪಡೆದರೆ, ವೆಂಕಟೇಶ ಡಿ `ಕನ್ನಡ ಸಂಘ ಬಾಲ ಕೇಸರಿ' ಪ್ರಶಸ್ತಿ ಹಾಗೂ ಹರಿಯಾಣದ ಮನ್‌ದೀಪ್ ಡೋಲು `ಭಾರತ ಮಲ್ಲ ಸಾಮ್ರಾಟ' ಪ್ರಶಸ್ತಿಗೆ ಭಾಜನರಾದರು.

74 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ದಾವಣಗೆರೆಯ ಕಾರ್ತಿಕ ಕಾಟೆ ಬೆಳಗಾವಿಯ ಪಾಂಡು ಶಿಂಧೆ ಅವರನ್ನು ಚಿತ್ ಮಾಡಿದರು. ಕನ್ನಡ ಸಂಘ ಬಾಲ ಕೇಸರಿ ಪ್ರಶಸ್ತಿಗಾಗಿ 50 ಕೆಜಿ ವಿಭಾಗದಲ್ಲಿ ನಡೆದ ಸೆಣಸಾಟದಲ್ಲಿ ದಾವಣಗೆರೆಯ ವೆಂಕಟೇಶ ಡಿ. ಧಾರವಾಡದ ಮಂಜುನಾಥ ಡಿ ಅವರನ್ನು ಸೋಲಿಸಿದರು.

ಫಲಿತಾಂಶಗಳು: 74 ಕೆಜಿ ವಿಭಾಗ: ಮನ್‌ದೀಪ್ ಡೋಲು (ಹರ‌್ಯಾಣ)-1, ಮನೀಷ್ (ನವದೆಹಲಿ)-2, ಮೋಹಿತ್ (ಉತ್ತರ ಪ್ರದೇಶ)-3, ಸೋನು ಕುಮಾರ (ನವದೆಹಲಿ)-3.

74 ಕೆಜಿ ವಿಭಾಗ: ಕಾರ್ತಿಕ ಕಾಟೆ (ದಾವಣಗೆರೆ)-1, ಪಾಂಡು ಶಿಂಧೆ (ಬೆಳಗಾವಿ)-2, ಶಾಂತಪ್ಪ ಗೌರನ್ನವರ (ಸಾನಾಳ)-3, ಸಗರಪ್ಪ ಹನಗೋಜಿ (ಮುಧೋಳ)-3

66 ಕೆಜಿ ವಿಭಾಗ: ನಾಗರಾಜ ಎಂ (ಧಾರವಾಡ)-1, ಶಿವಾಜಿ ರೇಳೆಕರ (ಅಥಣಿ)-2, ಶಿವಾನಂದ (ದಾವಣಗೆರೆ)-3, ಸತ್ಪಾಲ ಪಿ. (ಹಾರೂಗೇರಿ)-3.

60 ಕೆಜಿ ವಿಭಾಗ: ಗೋಪಾಲ ಕೋಳಿ (ಧಾರವಾಡ)-1, ಸತೀಶ ಪಡತಾರೆ (ಧಾರವಾಡ)-2, ಮಲ್ಲಪ್ಪ ಸಿ. (ಚಿಂಚಲಿ)-3, ಗೋಪಾಲಗೌಡ ಟಿ. (ಕೆಕೆಆರ್‌ಎಂಎ)-3.

55 ಕೆಜಿ ವಿಭಾಗ: ವಿನಾಯಕ ಗುರವ (ಬೆಳಗಾವಿ)-1, ರವಿ ಕೆಂಪಣ್ಣವರ (ಬೆಳಗಾವಿ)-2, ಮನೋಜ ಬಿರ್ಜೆ (ಬೆಳಗಾವಿ)-3, ಪ್ರಭಾಕರ ಫಳಕೆ(ದಾವಣಗೆರೆ)-3.

50 ಕೆಜಿ ವಿಭಾಗ: ವೆಂಕಟೇಶ ಡಿ (ದಾವಣಗೆರೆ)-1, ಮಂಜುನಾಥ ಡಿ. (ಧಾರವಾಡ)-2, ರಾಜು ಬೆಳಗಾವಿ (ಬೆಳಗಾವಿ)-3, ಆಕಾಶ ಡಿ. (ದಾವಣಗೆರೆ)-3

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry