ಶನಿವಾರ, ಮೇ 15, 2021
24 °C

ಕುಸ್ತಿ: ಬಿವಿಬಿ ಕಾಲೇಜು ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಆತಿಥೇಯ ಬಿವಿಬಿ ಎಂಜಿನಿಯರಿಂಗ್ ಕಾಲೇಜು ತಂಡ ಸೋಮವಾರ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಂತರ ಕಾಲೇಜು ಕುಸ್ತಿ ಸ್ಪರ್ಧೆಯಲ್ಲಿ ಒಟ್ಟಾರೆ 15 ಪಾಯಿಂಟ್ ಸಂಗ್ರಹಿಸುವ ಮೂಲಕ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು.14 ಪಾಯಿಂಟ್ ಸಂಗ್ರಹಿಸಿದ ನಿಟ್ಟೆಯ ಎನ್‌ಎಂಎಎಂಐಟಿ ತಂಡ ರನ್ನರ್ಸ್‌ ಅಪ್‌ಗೆ ತೃಪ್ತಿ ಪಡಬೇಕಾಯಿತು. ಯಾವ ವಿಭಾಗದಲ್ಲೂ ಹುಬ್ಬಳ್ಳಿಯ ಬಿವಿಬಿ ಕಾಲೇಜು ತಂಡ ಯಾವ ವಿಭಾಗದಲ್ಲೂ ಮೊದಲ ಸ್ಥಾನ ಗಳಿಸದಿದ್ದರೂ ಎಲ್ಲ ವಿಭಾಗಗಳಲ್ಲಿ ದ್ವಿತೀಯ ಇಲ್ಲವೆ ತೃತೀಯ ಸ್ಥಾನ ಗಳಿಸುವ ಮೂಲಕ ಅಧಿಕ ಪಾಯಿಂಟ್ ಕಲೆ ಹಾಕಿತು.ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಶೆಟ್ಟರ್ ಸ್ಪರ್ಧೆಗೆ ಚಾಲನೆ ನೀಡಿದರು. ಅಂತರರಾಷ್ಟ್ರೀಯ ಕುಸ್ತಿಪಟು ಸಂದೀಪ ಕಾಟೆ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಂ. ಕುರಗೋಡಿ ಹಾಜರಿದ್ದರು.ಫಲಿತಾಂಶ: 50 ಕೆಜಿ ವಿಭಾಗ: ಮಂಜುನಾಥ ಮಾಲಗೌಡ (ಪಿಡಿಎಇಸಿ, ಗುಲ್ಬರ್ಗ)-1, ಸಂತೋಷ ಭಜಂತ್ರಿ (ಬಿವಿಬಿಸಿಇಟಿ, ಹುಬ್ಬಳ್ಳಿ)-2, ರೋಹಿತ್ ಶೆಟ್ಟಿ (ಎಐಇಟಿ, ಮೂಡಬಿದ್ರೆ), ಎನ್.ನಾಗರಾಜ್ (ಎಸ್‌ಎಂವಿಐಟಿ, ಬೆಂಗಳೂರು)-3; 55 ಕೆಜಿ ವಿಭಾಗ: ಅಮರದೀಪ ಪಾಟೀಲ (ಜಿಐಟಿ, ಬೆಳಗಾವಿ)-1, ಎನ್.ಎಚ್. ಹನುಮಂತ (ಬಿವಿಬಿಸಿಇಟಿ, ಹುಬ್ಬಳ್ಳಿ)-2, ಸುಬ್ರಹ್ಮಣ್ಯ, ಪಿ.ಪ್ರಸಾದ್ (ಇಬ್ಬರೂ ಎಐಇಟಿ, ಮೂಡಬಿದ್ರೆ)-3; 60 ಕೆಜಿ ವಿಭಾಗ: ಎಸ್.ರಾಮು (ಎಂವಿಜೆಸಿಇ, ಬೆಂಗಳೂರು)-1, ಸಂತೋಷ ಬೆಳವಿ (ಎಚ್‌ಐಟಿ, ನಿಡಸೋಸಿ)-2, ದೀಪಕ ಶೆಟ್ಟಿ (ಎಐಇಟಿ, ಮೂಡಬಿದ್ರೆ), ಸಿ.ಎನ್.ರವಿ (ಬಿವಿಬಿಸಿಇಟಿ, ಹುಬ್ಬಳ್ಳಿ)-3.66ಕೆಜಿ ವಿಭಾಗ: ಆರ್ಷಿದ್ ಪರ್ವೇಜ್ (ಎಐಇಟಿ, ಮೂಡಬಿದ್ರೆ)-1, ರವಿ ಪವಾರ (ಎನ್‌ಎಂಎಎಂಐಟಿ, ನಿಟ್ಟೆ)-2, ಅರ್ಸಾರುದ್ದೀನ್ (ಎಐಇಟಿ, ಮೂಡಬಿದ್ರೆ), ಎಂ.ಎನ್. ಪ್ರದೀಶ್ (ಎಸ್‌ಐಟಿ, ಮಂಗಳೂರು)-3; 74 ಕೆಜಿ ವಿಭಾಗ: ಸುಕ್ಷಿತಕುಮಾರ (ಎನ್‌ಎಂಎಎಂಐಟಿ, ನಿಟ್ಟೆ)-1, ಮುರುಳಿ ಎನ್.ಟಿ. (ಎಂವಿಜೆಸಿಇ, ಬೆಂಗಳೂರು)-2, ರಾಹುಲ್‌ಕುಮಾರ್ (ಬಿವಿಬಿಸಿಇಟಿ, ಹುಬ್ಬಳ್ಳಿ), ಕೆ. ಪವನ್ (ಜೈನ್ ಎಂಜಿನಿಯರಿಂಗ್ ಕಾಲೇಜ್, ಬೆಳಗಾವಿ)-3.

84 ಕೆಜಿ ವಿಭಾಗ: ಬಿ.ಆರ್. ಮನುರಾಜ (ಎನ್‌ಎಂಎಎಂಐಟಿ, ನಿಟ್ಟೆ)-1, ಪಂಕಜ್ ಚೌಬೆ (ಬಿವಿಬಿಸಿಇಟಿ, ಹುಬ್ಬಳ್ಳಿ)-2, ಸೂರ್ಯಕಾಂತ್ (ಎಸ್‌ಐಆರ್‌ಎಂವಿಐಟಿ, ಬೆಂಗಳೂರು), ಆರ್.ಬಿ. ಶಿವಕುಮಾರ್ (ಬಿವಿಬಿಸಿಇಟಿ, ಹುಬ್ಬಳ್ಳಿ)-3; 96 ಕೆಜಿ ವಿಭಾಗ: ಸತೀಶಕುಮಾರ್ (ಎಸ್‌ಐಆರ್‌ಎಂವಿಐಟಿ, ಬೆಂಗಳೂರು)-1, ಪ್ರವೇಶಕುಮಾರ್ (ಬಿವಿಬಿಸಿಇಟಿ, ಹುಬ್ಬಳ್ಳಿ)-2, ಭೀಮಸಾಗರ (ಎಐಇಟಿ, ಮೂಡಬಿದ್ರೆ), ಮೊಹಮ್ಮದ್ ಷರೀಫ್ (ಎನ್‌ಎಂಎಎಂಐಟಿ, ನಿಟ್ಟೆ)-3, 96 ಕೆಜಿ ಮೇಲ್ಪಟ್ಟವರ ವಿಭಾಗ: ಕಿರಣಕುಮಾರ್ (ಎಂಎಸ್‌ಆರ್‌ಐಟಿ, ಬೆಂಗಳೂರು)-1, ಎಸ್.ನಿಶಾಂತ್ (ಎಸ್‌ಐಆರ್‌ಎಂವಿಇಟಿ, ಬೆಂಗಳೂರು)-2, ದಿನೇಶ ಜೆ (ಎಂವಿಜೆಸಿಇ, ಬೆಂಗಳೂರು), ಲಿಯೊನಿಲ್ ಮೆನೆಜಿಸ್ (ಎಐಇಟಿ, ಮೂಡಬಿದ್ರೆ)-3.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.