ಕುಸ್ತಿ: ಬೆಳಗಾವಿ ಚಾಂಪಿಯನ್

7

ಕುಸ್ತಿ: ಬೆಳಗಾವಿ ಚಾಂಪಿಯನ್

Published:
Updated:
ಕುಸ್ತಿ: ಬೆಳಗಾವಿ ಚಾಂಪಿಯನ್

ಧಾರವಾಡ: ಹೈಸ್ಕೂಲ್ ಹಾಗೂ ಪ್ರಾಥಮಿಕ ಶಾಲಾ ವಿಭಾಗಗಳೆರಡರಲ್ಲೂ ಆಧಿಪತ್ಯ ಸ್ಥಾಪಿಸಿದ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಶಾಲಾ ವಿದ್ಯಾರ್ಥಿಗಳ ರಾಜ್ಯ ಕುಸ್ತಿ ಚಾಂಪಿಯನ್‌ಷಿಪ್‌ನ ಎರಡೂ ವಿಭಾಗಗಳ ಚಾಂಪಿಯನ್ ಪಟ್ಟವನ್ನು ಬಗಲಿಗೆ ಹಾಕಿಕೊಂಡಿತು.ಇಲ್ಲಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಮುಕ್ತಾಯಗೊಂಡ ಚಾಂಪಿಯನ್‌ಷಿಪ್‌ನಲ್ಲಿ ದಾವಣಗೆರೆ ಶೈಕ್ಷಣಿಕ ಜಿಲ್ಲೆ ಎರಡೂ ವಿಭಾಗಗಳಲ್ಲಿ ರನ್ನರ್ ಅಪ್ ಆಯಿತು.ಫಲಿತಾಂಶಗಳು: ಹೈಸ್ಕೂಲ್ ವಿಭಾಗ: 42 ಕೆ.ಜಿ: ತೌಸಿಫ್ ನದಾಫ್ (ಬೆಳಗಾವಿ)-1, ಸಯ್ಯದ್ ಇಮ್ರಾನ್ (ಹಾಸನ)-2. 46 ಕೆ.ಜಿ:  ಶಿವಾನಂದ ತಳವಾರ (ಬೆಳಗಾವಿ)-1, ಮಂಜುನಾಥ (ಧಾರವಾಡ)-2. 50 ಕೆ.ಜಿ: ರವಿ ಕೆಂಪಣ್ಣವರ (ಬೆಳಗಾವಿ)-1, ಮಲಗೌಡ ಪಾಟೀಲ (ಚಿಕ್ಕೋಡಿ)-2. 54 ಕೆ.ಜಿ: ಕೆಂಚಪ್ಪ ಎಸ್ (ದಾವಣಗೆರೆ)-1, ಪ್ರಕಾಶ ಕೆ.ಬಿ. (ಚಿಕ್ಕೋಡಿ)-2. 58 ಕೆ.ಜಿ: ಚಂದ್ರಶೇಖರ ಎಸ್ (ದಾವಣಗೆರೆ)-1,  ಬಸವರಾಜ ಎಸ್.ಬಿ. (ಬೆಳಗಾವಿ)-2. 63 ಕೆ.ಜಿ: ಗುರುಲಿಂಗಯ್ಯ ಯರಗಟ್ಟಿ (ಚಿಕ್ಕೋಡಿ)-1,ಉಮೇಶ ಬಿ (ದ.ಕ)-2. 69 ಕೆ.ಜಿ: ಮಹಾದೇವ ಶಿಂಧೆ (ದಾವಣಗೆರೆ)-1, ಲಕ್ಷ್ಮಣ ತಳವಾರ (ಧಾರವಾಡ)-2. 76 ಕೆ.ಜಿ: ನಿರ್ಪಾಡಿ ದಡ್ಡಿ (ಚಿಕ್ಕೋಡಿ)-1, ಭರತ್ ಆರ್ (ಚಿಕ್ಕಮಗಳೂರು)-2.  ಪ್ರಾಥಮಿಕ ಶಾಲಾ ವಿಭಾಗ: 32 ಕೆ.ಜಿ: ಸಚಿನ್ ಟಿ. ಅಂಬೋಜಿ (ಬೆಳಗಾವಿ)-1, ಸದಾಶಿವ ಎನ್ (ಬಾಗಲಕೋಟೆ)-2.35 ಕೆ.ಜಿ: ಅರ್ಜುನ ಹುಲಕುರ್ಕಿ (ಬಾಗಲಕೋಟೆ)-1, ಲಕ್ಷ್ಮಣ ಎಸ್.ಜಿ (ಬೆಳಗಾವಿ)-2. 38 ಕೆ.ಜಿ: ಅರುಣ ಮೊಕಾಶಿ (ಬೆಳಗಾವಿ)-1, ಅನಿಲ ದಳವಾಯಿ (ಗದಗ)-2.41 ಕೆ.ಜಿ. ವಿಭಾಗ: ಅಜಿತ್ ಬಿ. ತೊಣಶ್ಯಾಳ (ಬೆಳಗಾವಿ)-1, ಈರಯ್ಯ  ಮಠಪತಿ (ಬಾಗಲಕೋಟೆ)-2. 45 ಕೆ.ಜಿ: ಆಕಾಶ ಬಿ. (ದಾವಣಗೆರೆ)-1, ರಾಜು ನಿಂಗಪ್ಪ (ಬೆಳಗಾವಿ)-2. 49 ಕೆ.ಜಿ: ಮಲ್ಲಪ್ಪ ಎಚ್.ಕಬಾಡಿ  (ದಾವಣಗೆರೆ)-1, ವಿನೋದ ಡಿ. ಬಡಕುದರಿ (ಬೆಳಗಾವಿ)-2.55 ಕೆ.ಜಿ: ರಮೇಶ ಹೊಸಕೋಟಿ (ಚಿಕ್ಕೋಡಿ)-1, ಯತಿರಾಜ ಬಿ.ಆರ್ (ದಾವಣಗೆರೆ)-2. 60 ಕೆ.ಜಿ: ಮರುಳಸಿದ್ದಪ್ಪ ಕುಶಪ್ಪನವರ (ಬೆಳಗಾವಿ)-1, ಲಕ್ಷ್ಮಣ ಸಾವಲಗಿ (ದಾವಣಗೆರೆ)-2.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry