ಕುಸ್ತಿ: ಯುದ್ಧವೀರ ಭಾರತ ಕೇಸರಿ

7

ಕುಸ್ತಿ: ಯುದ್ಧವೀರ ಭಾರತ ಕೇಸರಿ

Published:
Updated:

ಜಮಖಂಡಿ: ತಾಲ್ಲೂಕಿನ ಆಲಗೂರ ಗ್ರಾಮದ ಜೈ ಹನುಮಾನ್ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಕುಸ್ತಿ ಟೂರ್ನಿಯಲ್ಲಿ ಪುಣೆಯ ಭಾರತೀಯ ಸೇನೆಯ ಯುದ್ಧವೀರ `ಭಾರತ ಕೇಸರಿ~ ಪ್ರಶಸ್ತಿಯನ್ನು ಬಾಚಿಕೊಂಡು ಬೆಳ್ಳಿಗದೆಯನ್ನು ತಮ್ಮ ಹೆಗಲಿಗೇರಿಸಿಕೊಂಡರು.ಪ್ರಶಸ್ತಿಗಾಗಿ ನಡೆದ ಫೈನಲ್ ಪಂದ್ಯದಲ್ಲಿ ಯುದ್ಧವೀರ ಅವರು ಹರಿಯಾಣಣದ ಸತ್ಯವ್ರತ ಅವರನ್ನು ಮಣಿಸಿ ಪ್ರಶಸ್ತಿಗೆ ಲಗ್ಗೆ ಹಾಕಿದರು. ಪಂದ್ಯದ 15 ನಿಮಿಷಗಳ ಮೊದಲ ಸುತ್ತಿನಲ್ಲಿ ಇಬ್ಬರೂ ಪೈಲ್ವಾನರು ಯಾವುದೇ ಅಂಕ ಗಳಿಸದೇ ಸಮಬಲ ಪ್ರದರ್ಶಿಸಿದ್ದರು. ಆದರೆ 6 ನಿಮಿಷಗಳ ಎರಡನೇ ಸುತ್ತಿನಲ್ಲಿ ಯುದ್ಧವೀರ 2 ಅಂಕ ಪಡೆದು ಮೇಲುಗೈ ಸಾಧಿಸುವ ಮನ್ಸೂಚನೆ ನೀಡಿದರು. ಆರು ನಿಮಿಷಗಳ ಮೂರನೇ ಸುತ್ತಿನ ಪಂದ್ಯದಲ್ಲಿ ಮತ್ತೆ 2 ಅಂಕ ಗಳಿಸಿದ ಯುದ್ಧವೀರ ಪ್ರಶಸ್ತಿಗೆ ಭಾಜನರಾದರು. ಸತ್ಯವ್ರತ ಕೇವಲ 2 ಅಂಕ ಪಡೆಯುವಲ್ಲಿ ಯಶಸ್ವಿಯಾದರು.ಜೈ ಹನುಮಾನ್ ಕೇಸರಿ ಪ್ರಶಸ್ತಿಗಾಗಿ ನಡೆದ ಪುರುಷರ 74 ಕೆಜಿ ವಿಭಾಗದ ರಾಜ್ಯ ಮಟ್ಟದ ಕುಸ್ತಿಯಲ್ಲಿ ಎಸ್‌ಟಿಸಿ ಧಾರವಾಡದ ಸಂದೀಪ ಕಾಟೆ ಅವರು ಕೆಎಸ್‌ಪಿ ದಾವಣಗೆರೆಯ ಲೋಕೇಶ ಯಲಶೆಟ್ಟಿ ಅವರನ್ನು ಪರಭಾವಗೊಳಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ಫಲಿತಾಂಶಗಳು:ಪುರುಷರ ವಿಭಾಗ:

60 ಕೆಜಿ ವಿಭಾಗ: ನಾಗರಾಜ (ಧಾರವಾಡ ಎಸ್‌ಟಿಸಿ)-1, ಶರೀಫ ಜಮಾದಾರ (ಹಳಿಯಾಳ)-2, ಚಂದ್ರಶೇಖರ (ದಾವಣಗೆರೆ ಕ್ರೀಡಾಶಾಲೆ)-3, ಎಂ.ಎಲ್.ದೊಂಡಿ(ಮುಧೋಳ)-3, 66 ಕೆಜಿ ವಿಭಾಗ: ನಿಶಾಂತ ಪಾಟೀಲ (ಬೆಳಗಾವಿ ಕ್ರೀಡಾಶಾಲೆ)-1, ಸುರೇಶ ಬ್ಯಾಕೋಡ (ಧಾರವಾಡ ಎಸ್‌ಟಿಸಿ)-2, ಮನೋಜ ಬಂಡಿ (ಜಮಖಂಡಿ)-3, ರಮೇಶ ಫಳಕೆ (ಆಲಗೂರ)-374 ಕೆಜಿ ವಿಭಾಗ: ಸಂದೀಪ ಕಾಟೆ (ಧಾರವಾಡ ಎಸ್‌ಟಿಸಿ)-1, ಲೋಕೇಶ ಯಲಶೆಟ್ಟಿ (ದಾವಣಗೆರೆ ಕೆಎಸ್ಪಿ)-2, ಆನಂದ ಫಳಕೆ (ಆಲಗೂರ)-3, ಕಾರ್ತಿಕ ಕಾಟೆ (ದಾವಣಗೆರೆ ಕ್ರಿಡಾಶಾಲೆ)-3, ರಾಷ್ಟ್ರ ಮಟ್ಟದ ಭಾರತ ಕೇಸರಿ ಪ್ರಶಸ್ತಿ: ಯುದ್ಧವೀರ (ಪುಣೆ)-1, ಸತ್ಯವೃತ (ಹರ‌್ಯಾಣ)-2, ಮಲ್ಲಪ್ಪ ಪಾಟೀಲ (ದಾವಣಗೆರೆ)-3, ವಿಕ್ರಾಂತ ಜಾಧವ (ಪುಣೆ)-3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry