ಕುಸ್ತಿ: ಸಂದೀಪ್‌ ಐತಿಹಾಸಿಕ ಸಾಧನೆ

7

ಕುಸ್ತಿ: ಸಂದೀಪ್‌ ಐತಿಹಾಸಿಕ ಸಾಧನೆ

Published:
Updated:

ಬುಡಾಪೆಸ್ಟ್‌ (ಪಿಟಿಐ): ಭಾರತದ ಕುಸ್ತಿಪಟು ಸಂದೀಪ್‌ ತುಳಸಿ ಯಾದವ್‌ ಐತಿಹಾಸಿಕ ಸಾಧನೆಗೆ ಕಾರಣರಾಗಿ ದ್ದಾರೆ. ಅವರು ಇಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ಗ್ರೀಕೊ-ರೋಮನ್‌ ವಿಭಾಗದಲ್ಲಿಕಂಚಿನ ಪದಕ ಜಯಿಸಿದ್ದಾರೆ.ಗ್ರೀಕೊ-ರೋಮನ್‌ ವಿಭಾಗದಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಸಂದೀಪ್‌ ಪಾತ್ರರಾಗಿದ್ದಾರೆ.ಸಂದೀಪ್‌ 66 ಕೆ.ಜಿ.ವಿಭಾಗದಲ್ಲಿ ಭಾನುವಾರ 4-0 ಪಾಯಿಂಟ್‌ಗಳಿಂದ ಸರ್ಬಿಯಾದ ಅಲೆಕ್ಸಾಂಡರ್‌ ಮಕ್ಸಿಮೊ ವಿಕ್‌ ಎದುರು ಗೆಲುವು ಸಾಧಿಸಿದರು. ಇದಕ್ಕೂ ಮೊದಲು ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಹನ್‌ ಸು  ರಿಯು ಎದುರು ಸೋಲು ಕಂಡಿದ್ದರು. ಆದರೆ ಹನ್‌ ಸು ರಿಯು ಫೈನಲ್‌ ತಲುಪಿದ ಕಾರಣ ರಿಪಿಚೇಜ್‌ ವಿಭಾಗದಲ್ಲಿ ಸ್ಪರ್ಧಿಸಲು ಸಂದೀಪ್‌ಗೆ ಅವಕಾಶ ಲಭಿಸಿತ್ತು.ಈ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಒಟ್ಟು ಮೂರು ಪದಕ ಜಯಿ ಸಿತು. ಈ ಮೊದಲು ಅಮಿತ್‌ ಕುಮಾರ್‌ ಬೆಳ್ಳಿ ಜಯಿಸಿದ್ದರು. ಬಜರಂಗ್‌ ಕಂಚು ಗೆದ್ದಿದ್ದರು. ಹಾಗಾಗಿ ಇದು ಭಾರತದ ಮಟ್ಟಿಗೆ ಅತ್ಯುತ್ತಮ ಸಾಧನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry