ಶನಿವಾರ, ಮಾರ್ಚ್ 6, 2021
22 °C

ಕೂಗಳತೆಯಲ್ಲಿ ಜಲಾಶಯ: ತಪ್ಪದ ನೀರಿನ ಬವಣೆ

ಪ್ರಜಾವಾಣಿ ವಾರ್ತೆ ಎಚ್.ಎಸ್.ಶ್ರೀಹರಪ್ರಸಾದ್ Updated:

ಅಕ್ಷರ ಗಾತ್ರ : | |

ಕೂಗಳತೆಯಲ್ಲಿ ಜಲಾಶಯ: ತಪ್ಪದ ನೀರಿನ ಬವಣೆ

ಮರಿಯಮ್ಮನಹಳ್ಳಿ: `ಸಮುದ್ರ ನೆಂಟಸ್ತನ, ಉಪ್ಪಿಗೆ ಬಡತನ~ ಎನ್ನುವ ಗಾದೆಯಂತೆ ಸಾವಿರಾರು ಎಕರೆ ಭೂಮಿಗೆ ಹಾಗೂ ಜನರಿಗೆ ನೀರು ಒದಗಿಸುವ ತುಂಗಭದ್ರ ಜಲಾಶಯದ ಹಿನ್ನೀರಿನ ದಡದಲ್ಲಿದ್ದರೂ ಕುಡಿಯುವ ನೀರಿಗೆ ನಿತ್ಯ ಬವಣೆ ಪಡುವ ಸ್ಥಿತಿ ಪಟ್ಟಣ ಸೇರಿದಂತೆ ಹೋಬಳಿಯ ಜನರದ್ದು.1953ರಲ್ಲಿ ತುಂಗಭದ್ರಾ ಜಲಾಶಯಕ್ಕೆ ಸುಮಾರು ಹಳ್ಳಿಗಳು ಮುಳುಗಡೆಯಾದವು. ಅದರಲ್ಲಿ ಕೆಲಗ್ರಾಮಗಳು ಪಟ್ಟಣದ ಸೇರಿದಂತೆ ಇತರೆ ಸ್ಥಳಾಂತರಗೊಂಡಿವೆ. ಜಲಾಶಯಕ್ಕಾಗಿ ತಮ್ಮ ಸರ್ವಸ್ವವನ್ನು ತೊರೆದು ಬಂದ ಜನರಿಗೆ ಕೂಗಳತೆಯಲ್ಲ ಜಲಾಶಯ ಇದ್ದರೂ ಸರಿಯಾಗಿ ಕುಡಿಯುವ ನೀರು ದೊರಕದಂತೆ ಸ್ಥಿತಿಯಿದೆ.

 

ಕುಡಿಯುವ ನೀರಿನ ಬವಣೆ ತಪ್ಪಿಸಿಲ್ಲೆಂದು ಕಳೆದ 2003ರಲ್ಲಿ 3.5 ಕೋಟಿ ವೆಚ್ಚದಲ್ಲಿ ಆರಂಭವಾದ ಮರಿಯಮ್ಮನಹಳ್ಳಿ, ಡಣಾಪುರ, ಡಣಾಯಕನಕೆರೆ ಗ್ರಾಮ ಪಂಚಾಯ್ತಿಗಳನ್ನು ಒಳಗೊಂಡ ಏಳು ಗ್ರಾಮಗಳ ಸಮುದಾಯ ಆಧಾರಿತ ಕುಡಿಯುವ ನೀರಿನ ಯೋಜನೆ ಒಂದೆಡೆ ಸರ್ಕಾರದ ಕಡೆಗಣನೆ, ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದಾಗಿ ಯೋಜನೆ ಕುಂಟುತ್ತಾ ಸಾಗಿದ್ದು ಜನರ ಪಾಲಿಗೆ ಒಂದು ರೀತಿಯಲ್ಲಿ ಇದ್ದೂ ಇಲ್ಲದಂತಾಗಿದೆ.ಮೊದಲು ಸ್ಮಯೋರ್ ಕಾರ್ಖಾನೆಗೆ ನೀರು ಸರಬರಾಜು ಮಾಡುವ ಪೈಪ್‌ಲೈನಲ್ಲೇ ನೀರು ಸಾಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿತ್ತು. ಆದರೆ ಪೈಪ್‌ಲೈನ್ ಹಳೆಯದಾಗಿ ತುಕ್ಕು ಹಿಡಿದ್ದರಿಂದ ಈ ಯೋಜನೆಗೆ ಮತ್ತೆ ಸುಮಾರು 11.8 ಕಿ.ಮೀ ಉದ್ದ ಹೊಸ ಪೈಪ್‌ಲೈನ್ ಮಾಡಲು ಮತ್ತೆ ರಿವೈಜ್ ಎಸ್ಟಿಮೇಟ್ ಮಾಡಲಾಗಿ 2007ಕ್ಕೆ ಇದು 7.86 ಕೋಟಿಗೆ ತಲುಪಿತು. ಆದರೂ ನೀರು ಮಾತ್ರ ಬರಲ್ಲಿಲ್ಲ.ಕುಂಟುತ್ತಾ ಸಾಗಿದ್ದ ಯೋಜನೆಯಿಂದ ಕಳೆದ ವರ್ಷ  ನೀರು ಒದಗಿಸಲು ಆರಂಭಿಸಿದ್ದು, ಹನುಮನಹಳ್ಳಿ, ಗಾಳೆಮ್ಮನ ಹಾಗೂ ಪಟ್ಟಣದ ಕೇವಲ 3 ವಾರ್ಡ್‌ಗಳನ್ನು ಬಿಟ್ಟರೆ ಉಳಿದ ವಾರ್ಡ್‌ಗಳು ಸೇರಿದಂತೆ ಮರಿಯಮ್ಮನಹಳ್ಳಿ ತಾಂಡ, ದೇವಲಾಪುರ, ಡಣಾಯಕನಕೆರೆ ಗ್ರಾಮಗಳಿಗೆ ಈ ಯೋಜನೆಯ ನೀರು ಇನ್ನು ಸರಬರಾಜಾಗಿಲ್ಲ. ಪಟ್ಟಣದ ಇನ್ನು ವಾರ್ಡ್‌ಗಳಿಗೆ ಬೋರ್‌ವೆಲ್ ನೀರೆ ಗತಿಯಿದ್ದು ಅದು ನಾಲ್ಕೈದು ದಿನಗಳಿಮ್ಮೆ ನೀರು ಬಿಡ ಲಾಗುತ್ತಿದೆ. ಇನ್ನು ಕೆಲ ವಾರ್ಡ್‌ಗಳಿಗೆ ನೀರಿನ ಪೈಪ್‌ಲೈನ್ ಹಾಕದೇ ಇದ್ದು, ಹಳೆಯ ಲೈನ್‌ನಲ್ಲೇ ನೀರು ಹರಿಸುತ್ತಿರುವು ದರಿಂದ ಎಲ್ಲೆಂದರಲ್ಲಿ ನೀರಿನ ಪೈಪ್‌ಗಳು ಒಡೆದು ನೀರು ಸೋರಿಕೆ ಸಾಮಾನ್ಯವಾಗಿದ್ದು ಸ್ಥಳೀಯ ಆಡಳಿದ ನಿರ್ವಹಣೆ ಬಗ್ಗೆ ಸಾರ್ವಜನಿಕರು ಅಸಹನೆ ವ್ಯಕ್ತಪಡೆಸುತ್ತಿದ್ದು, ಪಂಚಾಯ್ತಿಯವರಾಗಲಿ, ಎಂಜಿನಿಯರ್ ಬಂದು ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡೆಸುತ್ತಾರೆ. ಹನುಮನಹಳ್ಳಿ ಬಳಿಯಿರುವ ಯೋಜನೆಯ ಶುದ್ಧೀಕರಣ ಘಟಕದಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ನೀರಿನ ತೊಟ್ಟಿಗಳು ಪಾಚಿಗಟ್ಟಿರುವ ಜತೆಗೆ ನೀರು ಶುದ್ಧೀಕರಣಕ್ಕೆ ಬಳಸುವ ಆಲಮ್ ಸಹ ಬಳಸದೇ ನೇರವಾಗಿ ನಿರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ.ಜಿಲ್ಲಾ ಪಂಚಾಯ್ತಿಯ ಎಇಇ ವೆಂಕಟರಾಜು ಹೇಳುವಂತೆ, ಈ ಯೋಜನೆಯಲ್ಲಿ ಮರಿಯಮ್ಮನಹಳ್ಳಿ ತಾಂಡಾ, ದೇವಲಾಪುರ, ಡಣಾಯಕನಕೆರೆ ಗ್ರಾಮಕ್ಕೆ ನೀರು ಹರಿಸದೇ ಇರುವದರಿಂದ ಇನ್ನು ವಶಕ್ಕೆ ಬಂದಿಲ್ಲ. ಆದರೂ ಜನರಿಗೆ ನೀರು ತಲುಪಿಸುವ ಉದ್ದೇಶದಿಂದ ನಾವೇ ನೋಡಿ ಕೊಳ್ಳುತ್ತಿದ್ದು, ಈ ಯೋಜನೆಯ ಕಳೆದ ಒಂದು ವರ್ಷದ ಕರೆಂಟ್ ಬಿಲ್, ಆಲಮ್, ಸಿಬ್ಬಂದಿ ಸಂಬಳ  ಸೇರಿದಂತೆ ಸುಮಾರು 11ಲಕ್ಷ ಬಾಕಿಯಿದ್ದು, ಸರ್ಕಾರ ಇನ್ನು ಹಣ ಒದಗಿಸಿಲ್ಲ, ಈ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚೆಸಲಾಗಿದೆ. ವ್ಯಾಪ್ತಿಯಲ್ಲಿ ನೀರಿನ ಮೂಲ ಸಾಕಷ್ಟಿದ್ದರೂ ಸ್ಥಳೀಯ ಪಂಚಾಯ್ತಿ ನೀರು ಬಿಡುವ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅಳಲ ತೋಡಿ ಕೊಳ್ಳು ತ್ತಾರೆ. ಶುದ್ಧೀಕರಣಕ್ಕೆ ಬಳಸುವ ಆಲಮ್ ಇತರೆ ವೆಚ್ಚಗಳನ್ನು ಸಂಬಂಧಪಟ್ಟ ಮರಿಯಮ್ಮನಹಳ್ಳಿ, ಡಣಾಪುರ ಪಂಚಾಯ್ತಿ ಗಳು ವಹಿಸಿಕೊಳ್ಳಬೇಕಿದೆ ಆದರೆ ಅವರು ವಹಿಸಿಕೊಳ್ಳುತ್ತಿಲ್ಲ, ಇದರಿಂದ ಕೆಲವೆಡೆ ಅವ್ಯವಸ್ಥೆ ಆಗುತ್ತಿದೆ. ಮುಂದಿನ ತಿಂಗಳ ಕೊನೆಗೆ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ.  ಇನ್ನು ವ್ಯಾಪ್ತಿಯ ಡಣಾಪುರ ಪಂಚಾಯ್ತಿ ವೆಂಕಟಾಪುರ, ಹಂಪಿನಕಟೆ ಸೇರಿದಂತೆ ಇತರೆ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು, ಇದಕ್ಕೆ ಮೂಲ ಕಾರಣ ಸರಿಯಾಗಿ ವಿದ್ಯುತ್ ಇಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ಇನ್ನು ಡಣಾಯಕನಕೆರೆ ಪಂಚಾಯ್ತಿ ಗೊಲ್ಲರಹಳ್ಳಿ, ಜಿ.ನಾಗಲಾಪುರ ಪಂಚಾಯ್ತಿ ಗುಂಡಾ, ಗುಂಡಾ ತಾಂಡಾಗಳಲ್ಲಿ ಕೆಲದಿನಗಳಿಂದ ನೀರಿಗೆ ಪರದಾಡು ವಂತಾಗಿದ್ದು, ಪಕ್ಕದ ಕಾರ್ಖಾನೆಗಳಿಂದ ನೀರಿನ ಟ್ಯಾಂಕ್‌ಗಳ ಮೂಲಕ ಗ್ರಾಮಕ್ಕೆ ಸಾಗಿಸಲಾಗುತ್ತಿದೆ. ಚಿಲಕನಹಟ್ಟಿ ಪಂಚಾಯ್ತಿಯ ತಿಮ್ಮಲಾಪುರ ಗ್ರಾಮದಲ್ಲಿಯೂ ನೀರಿನ ಬವಣೆ ಉಂಟಾಗಿದೆ. ಇನ್ನು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳುವಂತೆ ವಿಧಾನಸಭಾ ಕ್ಷೇತ್ರವನ್ನು ಫ್ಲೋರೈಡ್ ಮುಕ್ತ ಕ್ಷೇತ್ರವನ್ನಾಗಿ ಮಾಡಲು ತುಂಗಭದ್ರ ಜಲಾಶಯದಿಂದ ಕುಡಿಯುವ ನೀರಿನ ಒದಗಿಸುವ ಯೋಜನೆ ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ 19 ಕೋಟಿ ರೂಪಾಯಿ ವೆಚ್ಚದಲ್ಲಿ ವ್ಯಾಪ್ತಿಯ ಚಿಲಕನಹಟ್ಟಿ ಮತ್ತು ಜಿ.ನಾಗಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 14 ಹಳ್ಳಿಗಳಿಗೆ ತುಂಗಭದ್ರ ಜಲಾಶಯದಿಂದ ಕುಡಿಯುವ ನೀರನ್ನು ಒದಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ. ಒಟ್ಟಾರೆ ಬರಗಾಲದಿಂದ ತತ್ತರಿಸುವ ಜನರಿಗೆ ಒಂದೆಡೆ ಬರಗಾಲ ಹಾಗೂಕುಡಿಯುವ ನೀರಿನ ಸಮಸ್ಯೆಯಿಂದಾಗಿ ನಿತ್ಯ ಒಂದಿಲ್ಲೊಂದು ಜಗಳ ಮನಸ್ತಾಪಗಳು ಸಾಮಾನ್ಯವಾಗಿದ್ದು, ಕುಡಿಯುವ ನೀರಿಗಾಗಿ ಕಳೆದ ತಿಂಗಳು ಈ ಭಾಗದ ಬ್ಯಾಲಕುಂದಿ ಗ್ರಾಮದಲ್ಲಿ ಕೊಲೆಯೂ ನಡೆದಿದೆ. ಆದರೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ನಮ್ಮ ಬವಣೆ ಕೇಳುತ್ತಿಲ್ಲ ಎಂದು ಸಾರ್ವಜನಿಕರ ದೂರಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.