ಶುಕ್ರವಾರ, ಫೆಬ್ರವರಿ 26, 2021
19 °C

ಕೂಡಲಸಂಗಮ: ಗಾಳಿ– ಮಳೆಗೆ ಅಪಾರ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡಲಸಂಗಮ: ಗಾಳಿ– ಮಳೆಗೆ ಅಪಾರ ಹಾನಿ

ಕೂಡಲಸಂಗಮ: ಕೂಡಲಸಂಗಮ, ಕೂಡಲಸಂಗಮ ಕ್ರಾಸ್ ಹಾಗೂ ತಗಡಿನ ಶೆಡ್ಡಿನಲ್ಲಿ ವಾಸ ಮಾಡುತ್ತಿರುವ ಹೂವನೂರ, ನಂದನೂರ, ವರಗೋಡ ದಿನ್ನಿ, ಕಜಗಲ್ಲ,ಕೆಂಗಲ್ಲ, ತುರಡಗಿ, ಕಟಗೂರ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಮಳೆ, ಬಿರುಗಾಳಿ ಹಾಗೂ ಮಂಗಳವಾರ ಬೀಸಿದ ಬಿರುಗಾಳಿಗೆ ಜನ ತೊಂದರೆ ಅನುಭವಿಸಿದ್ದಾರೆ.ಕೂಡಲಸಂಗಮದಲ್ಲಿ ಸಂಗಮೇಶ್ವರ ದೇವಾಲಯದ ಹೊರ ಆವರಣದಲ್ಲಿಯ 30ಕ್ಕೂ ಅಧಿಕ ಮರಗಳು ಉರುಳಿ ರಸ್ತೆಯ ಮೇಲೆ ಬಿದ್ದ ಪರಿಣಾಮ ರಸ್ತೆಯಲ್ಲಿ ನಿಲ್ಲಿಸಿದ 4 ದ್ವಿಚಕ್ರ ವಾಹನ, 2 ಟ್ರ್ಯಾಕ್ಸಗಳು ಹಾನಿಗೊಳಗಾಗಿವೆ. ಸಂಗಮೇಶ್ವರ ದೇವಾಲಯದ ಹೊರ ಭಾಗದಲ್ಲಿ ಇರುವ  ಸುಮಾರು 15ಕ್ಕೂ ಅಧಿಕ ಮಾರಾಟ ಮಳಿಗೆಗಳ ಪತ್ರಾಸಗಳು ಹಾರಿಹೋದ ಪರಿಣಾಮ ಅಪಾರ ನಷ್ಟ ಅನುಭವಿಸಿದ್ದಾರೆ.ಕೂಡಲಸಂಗಮ ಕ್ರಾಸ್‌ದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿು ನಿರ್ಮಿಸಿದ ಮಹಾ ದ್ವಾರದ ಮೇಲಿನ ಷಟ್ಕೋನ ಗಾಳಿಗೆ ಬಿದ್ದ ಘಟನೆ ಸೋಮವಾರ ರಾತ್ರಿ ನಡೆದಿದೆ.ಕೃಷ್ಣಾ ನದಿಯ ಪ್ರವಾಹದಿಂದ ತುರಡಗಿ, ಕಟಗೂರ ಹಾಗೂ ಮಲಪ್ರಭಾ ನದಿಯ ಪ್ರವಾಹದಿಂದ ಕಜಗಲ್ಲ, ಕೆಂಗಲ್ಲ, ಹೂವನೂರ ಗ್ರಾಮದ ಜನರು ಭಯದಿಂದ ತಗಡಿನ ಶೆಡ್ಡಿನಲ್ಲಿ ರಾತ್ರಿ ಕಳೆದರು.ಬಿರುಗಾಳಿಗೆ ವಿದ್ಯುತ್ ಕಂಬಗಳು ಬಿದ್ದ ಪರಿಣಾಮ ವಿದ್ಯುತ್ ಇಲ್ಲದೇ ಮೊಬೈಲ್‌ ಸಂಪರ್ಕ ಸಿಗದೇ ಜನರು ಪರದಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.