ಮಂಗಳವಾರ, ಮೇ 18, 2021
22 °C

ಕೂಡುಂಕುಳಂ ಅಣು ಸ್ಥಾವರ: 2 ತಿಂಗಳಲ್ಲಿ ಕಾರ್ಯಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದುರೆ (ಪಿಟಿಐ): ಕೂಡುಂಕುಳಂ ಅಣುಶಕ್ತಿ ಯೋಜನೆಯ (ಕೆಎನ್‌ಪಿಪಿ) ಮೊದಲ ಘಟಕದ ಕಾಮಗಾರಿ ಶೇ 99ರಷ್ಟು ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಈ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಖಾತೆ ಸಚಿವ ವಿ. ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇಲ್ಲಿನ  ಸುಂದರೇಶ್ವರ- ಮೀನಾಕ್ಷಿ ದೇವಾಲಯಕ್ಕೆ ಶನಿವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, `ಮೊದಲ ಘಟಕ ಕಾರ್ಯಾರಂಭಕ್ಕೆ ಎಲ್ಲವೂ ಅಣಿಯಾಗಿದೆ. ಯುರೇನಿಯಂ ಇಂಧನವನ್ನು ಘಟಕಕ್ಕೆ ಭರ್ತಿ ಮಾಡುವುದಷ್ಟೇ ಬಾಕಿ~ ಎಂದರು.`ಸ್ಥಾವರದ ಎರಡನೇ ಘಟಕದಲ್ಲಿ ಶೇ. 5ರಷ್ಟು ಕೆಲಸ ಮಾತ್ರ ಬಾಕಿ ಇದೆ~ ಎಂದ ಅವರು, `ಈ ಸ್ಥಾವರದ ಎರಡು ಘಟಕಗಳಿಂದ ಉತ್ಪಾದನೆಯಾಗುವ ಅಷ್ಟೂ ವಿದ್ಯುತ್‌ಅನ್ನು ತಮಿಳುನಾಡಿಗೆ ನೀಡಬೇಕು ಎಂಬ ಬೇಡಿಕೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ~  ಎಂದರು.`ಶ್ರೀಲಂಕಾ ಸರ್ಕಾರ ಯುದ್ಧ ಸಂತ್ರಸ್ಥ ತಮಿಳರ ಪುನರ್ವಸತಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡದಿರುವುದು ನಮಗೆ (ಭಾರತ) ತೀವ್ರ ಅಸಮಾಧಾನ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ  ಆ ರಾಷ್ಟ್ರದ ವಿರುದ್ಧ ಕೈಗೊಂಡ ಮಾನವ ಹಕ್ಕುಗಳ ಉಲ್ಲಂಘನಾ ನಿರ್ಣಯದ ಪರವಾಗಿ ನಾವು ನಿಲುವು ತಳೆಯಬೇಕಾಯಿತು~ ಎಂದರು.

ಪ್ರಯೋಗಾರ್ಥ ಇಂಧನ ತೆರವು: ಅನುಮತಿ ನಿರೀಕ್ಷೆ

(ಐಎನ್‌ಎಸ್ ವರದಿ): ಕೂಡುಂಕುಳಂ ಅಣು ಸ್ಥಾವರ ಮೊದಲ ಘಟಕದ ಇಂಧನ ಟ್ಯಾಂಕ್ ತೆರೆದು ಅದರಲ್ಲಿರುವ ಪ್ರಯೋಗಾರ್ಥ (ಡಮ್ಮಿ) ಇಂಧನವನ್ನು  ಹೊರತೆಗೆಯಲು ಭಾರತೀಯ ಅಣು ಶಕ್ತಿ ನಿಗಮದ (ಎನ್‌ಪಿಸಿಐಎಲ್) ಅನುಮತಿಯನ್ನು ನಿರೀಕ್ಷಿಸಲಾಗುತ್ತಿದೆ ಅಧಿಕಾರಿಗಳು ತಿಳಿಸಿದ್ದಾರೆ.ಅಣು ಸ್ಥಾವರ ಘಟಕಗಳಲ್ಲಿ ಕಾಮಗಾರಿ ಭರದಿಂದ ಸಾಗಿದ್ದು, ಕಾರ್ಮಿಕರು ರಜೆಯ ದಿನಗಳಲ್ಲೂ ದುಡಿಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.