ಬುಧವಾರ, ಮೇ 12, 2021
18 °C

ಕೂಡುಂಕುಳಂ: ವಿರೋಧ ಇಲ್ಲ- ಶ್ರೀಲಂಕಾ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಪಿಟಿಐ): ವಿದ್ಯುತ್ ಅಗತ್ಯವನ್ನು ಪೂರೈಸಿಕೊಳ್ಳಲು ಪರಮಾಣು ತಂತ್ರಜ್ಞಾನ ಬಳಸಿಕೊಳ್ಳುವ ಎಲ್ಲಾ ಹಕ್ಕು ಭಾರತಕ್ಕೆ ಇರುವುದರಿಂದ ತಮಿಳುನಾಡಿನ ಕೂಡುಂಕುಳಂನಲ್ಲಿ ಸ್ಥಾಪಿಸಲಾಗುತ್ತಿರುವ ಅಣು ವಿದ್ಯುತ್ ಸ್ಥಾವರಕ್ಕೆ ತನ್ನ ವಿರೋಧವಿಲ್ಲ ಎಂದು ಶ್ರೀಲಂಕಾ ಸ್ಪಷ್ಟಪಡಿಸಿದೆ.ಕೂಡುಂಕುಳಂ ಯೋಜನೆಗೆ ಶ್ರೀಲಂಕಾದ ವಿರೋಧವಿದೆ ಎಂಬ ಮಾಧ್ಯಮಗಳ ವರದಿಯನ್ನು ಶ್ರೀಲಂಕಾದ ಪರಮಾಣು ಇಂಧನ ಪ್ರಾಧಿಕಾರವು ಅಲ್ಲಗಳೆದಿದೆ.ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಪರಮಾಣು ಇಂಧನ ಕಾವಲು ಸಂಸ್ಥೆಯ ಸಭೆಯಲ್ಲಿ ಕೂಡುಂಕುಳಂ ಸ್ಥಾವರಕ್ಕೆ ಶ್ರೀಲಂಕಾ ವಿರೋಧ ವ್ಯಕ್ತಪಡಿಸಲಿದೆ ಎಂಬ ಮಾಧ್ಯಮ ವರದಿಗಳು ಸತ್ಯಕ್ಕೆ ದೂರವಾದುದು ಎಂದು ಶ್ರೀಲಂಕಾದ ಪರಮಾಣು ಇಂಧನ ಪ್ರಾಧಿಕಾರದ ಅಧ್ಯಕ್ಷ ಆರ್. ಎಲ್. ವಿಜಯವರ್ಧನೆ ಸ್ಪಷ್ಟಪಡಿಸಿದ್ದಾರೆ.ಭಾರತದ ಪರಮಾಣು ವಿದ್ಯುತ್ ಸ್ಥಾವರಕ್ಕೆ  ವಿರೋಧ ವ್ಯಕ್ತಪಡಿಸಿಲ್ಲ ಅಥವಾ ಯಾವುದೇ ಸಂಸ್ಥೆಗೂ ದೂರು ಸಲ್ಲಿಸಿಲ್ಲ. ದೇಶದ ನೆಲದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸುವುದು ಭಾರತದ ಸಾರ್ವಭೌಮ ಹಕ್ಕಾಗಿದೆ ಎಂದು ತಿಳಿಸಿದ್ದಾರೆ.ಐಎಇಎ ಸಾಮಾನ್ಯ ಸಭೆಗೆ ಹಾಜರಾಗಿದ್ದ ಶ್ರೀಲಂಕಾದ ನಿಯೋಗದ ನೇತೃತ್ವ ವಹಿಸಿದ್ದ ರಾನವಾಕಾ ಅವರು ಭಾರತೀಯ ಪರಮಾಣು ಇಂಧನ ಆಯೋಗದ ಅಧ್ಯಕ್ಷರ ಜತೆ ಕೂಡಂಕುಳಂ ಸ್ಥಾವರಕ್ಕೆ ಭೇಟಿ ನೀಡಿರುವುದನ್ನೇ ತಪ್ಪಾಗಿ ಅರ್ಥೈಸಿಕೊಂಡ ಮಾಧ್ಯಮಗಳು ವ್ಯತಿರಿಕ್ತವಾದ ವರದಿಗಳನ್ನು ಪ್ರಕಟಿಸಿವೆ ಎಂದು ವಿಜಯವರ್ಧನೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.