ಕೂಡುಂಕುಳಂ ಸ್ಥಾವರ ಲೋಕಾರ್ಪಣೆ

7

ಕೂಡುಂಕುಳಂ ಸ್ಥಾವರ ಲೋಕಾರ್ಪಣೆ

Published:
Updated:
ಕೂಡುಂಕುಳಂ ಸ್ಥಾವರ ಲೋಕಾರ್ಪಣೆ

ಕೂಡುಂಕುಳಂ, ತಮಿಳುನಾಡು (ಪಿಟಿಐ): ಇಲ್ಲಿ ನಿರ್ಮಿಸಲಾಗಿರುವ ಒಂದು ಸಾವಿರ ಮೆಗಾವಾಟ್‌ ಸಾಮರ್ಥ್ಯದ ಪರಮಾಣು ವಿದ್ಯುತ್‌ ಸ್ಥಾವರ ಘಟಕ–1ನ್ನು ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮತ್ತು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಬುಧವಾರ ಜಂಟಿಯಾಗಿ ಲೋಕಾರ್ಪಣೆ ಮಾಡಿದರು.

‘ವಿಶ್ವದಲ್ಲಿರುವ ಅತ್ಯಂತ ಸುರಕ್ಷಿತ ಪರಮಾಣು ಸ್ಥಾನಗಳಲ್ಲಿ ಇದು ಒಂದಾಗಿದೆ’ ಎಂದು ಅವರು ಹೇಳಿದ್ದಾರೆ.ನವದೆಹಲಿಯಿಂದ ವಿಡಿಯೋ

ಕಾನ್ಫರೆನ್ಸ್‌ ಮೂಲಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಮಾತನಾಡಿ, ‘ದೇಶದಲ್ಲಿ ಶುದ್ಧ ಇಂಧನ ಉತ್ಪಾದನೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ರಷ್ಯಾ–ಭಾರತ ಸಹಯೋಗದಲ್ಲಿ ನಿರ್ಮಾಣವಾಗಿರುವ ಈ ಯೋಜನೆ ಮಹತ್ವದ್ದಾಗಿದೆ’ ಎಂದರು.

‘ರಷ್ಯಾದೊಂದಿಗೆ ಭಾರತ ಹೊಂದಿರುವ ಸ್ನೇಹಕ್ಕೆ ನಾನು ತುಂಬಾ ಗೌರವ ನೀಡುತ್ತೇನೆ. ಪರಮಾಣು ವಿದ್ಯುತ್‌ ಸ್ಥಾವರ ಲೋಕಾರ್ಪಣೆ ಮಾಡಿರುವುದು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಅಭಿವೃದ್ಧಿ ಸಾಧಿಸಲು ಮಾಡಿಕೊಂಡಿರುವ ಒಪ್ಪಂದವು ಇದನ್ನು ಸೂಚಿಸುತ್ತದೆ’ ಎಂದರು.ಮಾಸ್ಕೋದಿಂದ ಮಾತನಾಡಿದ ಪುಟಿನ್‌, ‘ಇದು ನಮ್ಮೆಲ್ಲರಿಗೂ ಒಂದು ಮಹತ್ವದ ಕಾರ್ಯಕ್ರಮ.  ಪರಮಾಣು ತಂತ್ರಜ್ಞಾನದಲ್ಲಿ ರಷ್ಯಾಗೆ ಜಾಗತಿಕ ಮನ್ನಣೆ ಇದೆ. ನಮ್ಮ  ತಂತ್ರಜ್ಞಾನವನ್ನು ಭಾರತದೊಂದಿಗೆ ಹಂಚಿಕೊಳ್ಳಲು ತುಂಬಾ ಹೆಮ್ಮೆ ಅನಿಸುತ್ತಿದೆ’ ಎಂದು  ಹೇಳಿದ್ದಾರೆ.

ಕೂಡುಂಕುಳಂ ಪರಮಾಣು ವಿದ್ಯುತ್‌ ಸ್ಥಾವರ ರಷ್ಯಾ ಮತ್ತು ಭಾರತದ ಮಧ್ಯೆ ಇರುವ ದೀರ್ಘಕಾಲೀನ ಸಂಬಂಧದ ಪ್ರತೀಕವಾಗಿದೆ ಎಂದು ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry