ಕೂಡುಂಕುಳಂ ಸ್ಥಾವರ ಸುತ್ತ ಸ್ಥಿತಿ ಸುಧಾರಿಸುವ ಭರವಸೆ

7

ಕೂಡುಂಕುಳಂ ಸ್ಥಾವರ ಸುತ್ತ ಸ್ಥಿತಿ ಸುಧಾರಿಸುವ ಭರವಸೆ

Published:
Updated:

ನವದೆಹಲಿ (ಪಿಟಿಐ):  ಕೂಡುಂಕುಳಂ ಪರಮಾಣು ಸ್ಥಾವರದ ಸುತ್ತಮುತ್ತ ಪ್ರಸ್ತುತ ಇರುವ ಪರಿಸ್ಥಿತಿಯು ನಾಲ್ಕೈದು ವಾರಗಳಲ್ಲಿ ಸಹಜ ಸ್ಥಿತಿಗೆ ಮರಳುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಭಾರತೀಯ ಪರಮಾಣು ವಿದ್ಯುತ್ ನಿಗಮ (ಎನ್‌ಪಿಸಿಐಎಲ್), ಆಗಸ್ಟ್ ವೇಳೆಗೆ ಸ್ಥಾವರ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದೆ.

`ನಾಲ್ಕರಿಂದ ಐದು ವಾರಗಳಲ್ಲಿ ಕೂಡುಂಕುಳಂನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರಲಿದೆ ಎಂಬ ನಿರೀಕ್ಷೆ ನನ್ನದು~ ಎಂದು ಎನ್‌ಪಿಸಿಐಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಹಜ ಸ್ಥಿತಿಗೆ ಮರಳಿದ ಬಳಿಕ ಕೂಡುಂಕುಳಂ ಪರಮಾಣು ವಿದ್ಯುತ್ ಯೋಜನೆಯ 1000 ಮೆಗಾವ್ಯಾಟ್ ಸಾಮರ್ಥ್ಯದ ಮೊದಲ ವಿದ್ಯುತ್ ಘಟಕ ಕಾರ್ಯಾರಂಭಕ್ಕೆ ನಾಲ್ಕು ತಿಂಗಳ ಕಾಲಾವಕಾಶ ಬೇಕು ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry