ಶನಿವಾರ, ನವೆಂಬರ್ 23, 2019
18 °C

ಕೂಡ್ಲಿಗಿ: ಊರಿಗೊಂದೇ ಮಹಿಳಾ ಶೌಚಾಲಯ

Published:
Updated:

ಕೂಡ್ಲಿಗಿ: ಪಟ್ಟಣಕ್ಕೆ ಇರುವುದೊಂದೇ ಸಾರ್ವಜನಿಕ ಮಹಿಳಾ ಶೌಚಾಲಯ. ತಾಲ್ಲೂಕು ಕೇಂದ್ರವಾದ ಕೂಡ್ಲಿಗಿಯಲ್ಲಿ ಸುಮಾರು 27 ಸಾವಿರ ಜನಸಂಖ್ಯೆಯಿದೆ. ಅದರಲ್ಲಿ 13 ಸಾವಿರ ಮಹಿಳೆಯರಿದ್ದಾರೆ. ಇವರ್ಲ್ಲೆಲ ಕಾರ್ಯನಿಮಿತ್ತ ಹೊರಗೆ ಬಂದರೆ, ಶೌಚಾಲಯವ್ಲ್ಲಿಲದೆ ತೊಂದರೆ ಅನುಭವಿಸಲೇಬೇಕಾದ ದುಃಸ್ಥಿತಿಯಿದೆ.ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಮಾತ್ರ ಮಹಿಳೆಯರಿಗೆ ಶೌಚಾಲಯವಿದೆ. ಶೌಚಕ್ಕಾಗಿ ಬಸ್ ನಿಲ್ದಾಣದವರೆಗೆ ನಡೆದು ಬರಬೇಕು. ಅಲ್ಲಿಯೂ ಶೌಚಾಲಯ ಹೆಸರಿಗಷ್ಟೇ ಇದೆ. ಒಳಗೆ ಕಾಲಿಡಲು ಸಾಧ್ಯವಾಗದಷ್ಟು ಕೊಳಕಾಗಿದೆ ಹೀಗಾಗಿ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಸಂದರ್ಭಗಳಲ್ಲಿ ಮುಜುಗರಕ್ಕೂ ಒಳಗಾಗಿದ್ದಾರೆ.ಬಸ್ ನಿಲ್ದಾಣದ ಶೌಚಾಲಯವನ್ನು ಯುವಕರು ನಿರ್ವಹಿಸುತ್ತಾರೆ. ಸದಾಕಾಲ 2-3 ಯುವಕರು ಅಲ್ಲಿಯೇ ಇರುವುದರಿಂದಾಗಿ ಮಹಿಳೆಯರಿಗೆ ಶೌಚಾಲಯದೊಳಗೆ ಹೋಗಲು ಮುಜುಗರ. ಹೊರಭಾಗದಲ್ಲಿ ಒಂದು ಪರದೆಯನ್ನು ಹಾಕಲಾಗಿದೆ. ಆದರೆದರೂ ಯಾರು, ಎ್ಲ್ಲಲಿ ಕದ್ದು ನೋಡುವರೋ ಎಂಬ ಭಯದಲ್ಲಿಯೇ ಮಹಿಳೆಯರು ಒಳಹೋಗಿ ಬರಬೇಕಾಗಿದೆ. ವಿದ್ಯುತ್ ಕಡಿತವಾದರೆ ಮಹಿಳೆಯರ ಪರಿಸ್ಥಿತಿ ಇನ್ನೂ ಆತಂಕಕಾರಿ. ಕೇವಲ ಒಂದು ಮೇಣಬತ್ತಿಯ ಬೆಳಕಿನಲ್ಲಿ ಮಹಿಳೆಯರು ಶೌಚಾಲಯದೊಳಗೆ ಹೋಗಿ ಬರಬೇಕಾಗುವುದು.ಈ ನರಕಸದೃಶ್ಯ ಸ್ಥಿತಿಯಿಂದ ಹೊರಗೆಲ್ಲಾದರೂ ಹೋಗಬೇಕೆಂದರೆ, ಸುತ್ತಲೂ ಮನೆಗಳಿವೆ. ವಿದ್ಯುತ್ ಕಡಿತಗೊಂಡಾಗ ನಿಲ್ದಾಣದ ಹಿಂಭಾಗದ ಕಂಪೌಂಡ್ ಬಳಿ ಅವಸರದಲ್ಲಿ ಹೋದ ಮಹಿಳೆಯರು ಕುಡುಕರು, ಪುಂಡರ ಕಾಟ ಅನುಭವಿಸಬೇಕಾಗುತ್ತದೆ ಎನ್ನುವರು.`ಕತ್ತಲದಾಗ ಆ ಹೊಲಸು ಶೌಚಾಲಯದಾಗ ಹೋಗೋದಕ್ಕಿಂತ, ಹೆಂಗಾದ್ರೂ ಬೇಗನೆ ಕಂಪೌಂಡ ಹಿಂದ ಹೋಗಿ ಬಂದ್ರಾತು ಅಂತ ಹೋದ್ರ ಅಲ್ಲಿ ಕುಡುಕ್ರ ನಿಂತಿರತಾರ, ಹೆಣ್ಮಕ್ಕಳಾಗಿ ಹುಟ್ಟಬಾರದ್ರಿ' ಎಂದು ಹೆಸರು ಹೇಳಲಿಚ್ಛಿಸದ ಮಹಿಳೆಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು.ಸಾರಿಗೆ ಸಂಸ್ಥೆಯವರು ಮಹಿಳಾ ಶೌಚಾಲಯದಲ್ಲಿ ಮಹಿಳೆಯರನ್ನೇ ಮೇಲ್ವಿಚಾರಕನ್ನಾಗಿ ನೇಮಿಸಬೇಕು, ಶೌಚಾಲಯವನ್ನು ಸ್ವಚ್ಛವಾಗಿರಿಸಬೇಕು, ವಿದ್ಯುತ್ ಕಡಿತಗೊಂಡಾಗ ನಿಲ್ದಾಣದ ಹಿಂಭಾಗದ ಕಂಪೌಂಡ್ ಬಳಿ ನಿಗಾ ವಹಿಸಬೇಕು ಎಂದು ನೊಂದ ಮಹಿಳೆಯರು ಕೋರಿದ್ದಾರೆ. ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳುವಂತೆ ವಂದೇಮಾತರಂ ಜಾಗೃತಿ ವೇದಿಕೆಯ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಳಮ್ಮ, ಪದಾಧಿಕಾರಿಗಳಾದ ಗೌರಮ್ಮ, ಭಾಗ್ಯ, ಅನುಪಮ, ಸಿದ್ದಮ್ಮ ಮುಂತಾದವರು ಆಗ್ರಹಿಸಿದ್ದಾರೆ.

ಸಿದ್ಧರಾಮ ಹಿರೇಮಠ

ಪ್ರತಿಕ್ರಿಯಿಸಿ (+)