ಕೂಲ್ ಹಾಡುಗಳು

7

ಕೂಲ್ ಹಾಡುಗಳು

Published:
Updated:

ಶಿಲ್ಪಾ ಗಣೇಶ್ ನಿರ್ಮಿಸುತ್ತಿರುವ ‘ಕೂಲ್’ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆದಿದೆ. ಕವಿರಾಜ್ ರಚನೆಯ ‘ಒಂದೇ ಹುಡುಗಿ ಒಂದೇ ಲವ್ ಅನ್ನೋದೆಲ್ಲಾ ಬರೀ ಡವ್.. ಪ್ರೀತಿಗಾಗಿ ಪ್ರಾಣ ನೀಡೋ ಪಾಪಿ ನಾನಲ್ಲ..’ ಎಂಬ ಗೀತೆಯ ಚಿತ್ರೀಕರಣ ಮೈಸೂರು ಲ್ಯಾಂಪ್ಸ್ ಅವರಣದಲ್ಲಿ ನಿರ್ಮಿಸಲಾಗಿರುವ  ಸೆಟ್‌ನಲ್ಲಿ ನಡೆಯಿತು.ನಾಯಕ ಗಣೇಶ್ ಹಾಗೂ ಆಸ್ಟ್ರೇಲಿಯಾ-ಲಂಡನ್ ನರ್ತಕಿಯರು ಈ ಹಾಡಿಗೆ ಹೆಜ್ಜೆ ಹಾಕಿದರು.  ಶಂಕರ್ ಈ ಗೀತೆಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಜೊತೆಗೆ ‘ಚಂದ್ರನ ಚಂದವ ಸಳೆಯುವ ಚೋರ ನಾನು ರಸಿಕರ ಹೃದಯದ ರಾಜ ನಾನು..’ ಗೀತೆಯ ಚಿತ್ರೀಕರಣ ಹೆಸರುಘಟ್ಟದ ಬಳಿ ನಡೆದಿದೆ. ಇದಕ್ಕೆ ವಿಷ್ಣುದೇವ್ ನೃತ್ಯ ನಿರ್ದೇಶನ ಮಾಡಿದ್ದಾರೆ.  ನಟ ಗಣೇಶ್ ನಿರ್ದೇಶನದ ಚೊಚ್ಚಲ ಚಿತ್ರ ಇದು.  ರತ್ನವೇಲು ಛಾಯಾಗ್ರಹಣ, ಆಂಟನಿ ಸಂಕಲನ, ರಮೇಶ್‌ದೇಸಾಯಿ ಕಲಾ ನಿರ್ದೇಶನ, ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ.ಗಣೇಶ್, ಸನಾಖಾನ್ ಚಿತ್ರದ ನಾಯಕ- ನಾಯಕಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry