ಸೋಮವಾರ, ಜನವರಿ 27, 2020
14 °C

ಕೃತಕ ಆಭರಣ ತಯಾರಿ ತರಬೇತಿ ಶಿಬಿರ ಸಮಾರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮಾವರ: ಆಧುನಿಕ ಜಗತ್ತಿನಲ್ಲಿ ಫ್ಯಾಷನ್ ಆಗಿ ಬಳಸಬಹುದಾದ ಕೃತಕ ಆಭರಣಗಳಿಗೆ ಹೆಚ್ಚು ಬೇಡಿಕೆ ಇದೆ ಎಂದು ಸಿಂಡಿಕೇಟ್ ಬ್ಯಾಂಕ್ ಉಡುಪಿ ಶಾಖೆ ಪ್ರಬಂಧಕ ಸುಬ್ಬರಾವ್ ಹೇಳಿದರು.ರುಡ್‌ಸೆಟ್ ಸಂಸ್ಥೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕೃತಕ ಆಭರಣ ತಯಾರಿಕೆ ತರಬೇತಿ ಸಮಾರೋಪದಲ್ಲಿ ತರಬೇತಿ ಪ್ರಮಾಣ ಪತ್ರ ವಿವರಿಸಿ ಅವರು ಮಾತನಾಡಿದರು.ರುಡ್‌ಸೆಟ್ ಸಂಸ್ಥೆ ನಿರ್ದೇಶಕ ವಿಜಯಕುಮಾರ್ ನೆರ್ಲೇಕರ್ ಮಾತನಾಡಿ, ತರಬೇತಿ ಪಡೆದ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಆ ಮೂಲಕ ಸ್ವಾವಲಂಬಿಗಳಾಗಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.ಸಂಪನ್ಮೂಲ ವ್ಯಕ್ತಿ ಸುಮತಿ ತರಬೇತಿ ಅನುಭವಗಳನ್ನು ಹಂಚಿಕೊಂಡರು.ಉಪನ್ಯಾಸಕ ಕರುಣಾಕರ ಜೈನ್, ಪಾಲ್‌ರಾಜ್, ಪ್ರಸಾದ್ ಇದ್ದರು. ಉಡುಪಿ, ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯಿಂದ 18 ಮಂದಿ ಶಿಬಿರಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)