ಶನಿವಾರ, ಆಗಸ್ಟ್ 24, 2019
28 °C

ಕೃತಕ ಮಾಂಸದ ಬರ್ಗರ್

Published:
Updated:

ಲಂಡನ್(ಪಿಟಿಐ): ಪ್ರಯೋಗಾಲಯದಲ್ಲಿ ಕೃತಕವಾಗಿ ಅಭಿವೃದ್ಧಿಪಡಿಸಿದ ದನದ ಮಾಂಸದಿಂದ ಸಿದ್ಧಪಡಿಸಿದ ಬರ್ಗರ್‌ನ ರುಚಿಯನ್ನು ಲಂಡನ್‌ನಲ್ಲಿ ಜನ ರಿಗೆ ಸವಿಯಲು ನೀಡಿದ್ದು, ಇದು ಮಾಂಸದ ರುಚಿಯನ್ನೇ ಹೋಲುತ್ತಿದ್ದರೂ ಅದರ ವೈಶಿಷ್ಟ್ಯ ಇದಕ್ಕಿಲ್ಲ ಎಂದು ತಜ್ಞರು ಹೇಳಿದ್ದಾರೆ.5 ವರ್ಷದ ಸಂಶೋಧನೆಯ ನಂತರ ಮಾಂಸವನ್ನು ಹೀಗೆ ಕೃತಕವಾಗಿ ಅಭಿ ವೃದ್ಧಿಪಡಿಸಲಾಗಿದೆ. ಮಾಸ್ಟ್ರಿಚ್ ವಿಶ್ವವಿದ್ಯಾನಿಲಯದ ಪ್ರೊ. ಮಾರ್ಕ್ ಪೋಸ್ಟ್ ದನದ ಆಕರಕೋಶಗಳನ್ನು ತೆಗೆದುಕೊಂಡು ಅದರಿಂದ ಈ ಮಾಂಸ ಅಭಿವೃದ್ಧಿ ಪಡಿಸಿದ್ದಾರೆ.ಪ್ರಯೋಗಾಲಯದಲ್ಲಿ ತಯಾರಾದ ವಿಶ್ವದ ಈ ಮೊದಲ ಬರ್ಗರ್‌ಗೆ 2.15 ಲಕ್ಷ ಪೌಂಡ್ (2 ಕೋಟಿ ರೂಪಾಯಿ) ವೆಚ್ಚವಾಗಿದೆ. ಕೃತಕ ಮಾಂಸ ಉತ್ಪಾದಿಸುವ ಈ ವಿಧಾನ ಆಹಾರ ಕ್ರಾಂತಿಗೆ ಕಾರಣವಾಗಲಿದೆ. ದಶಕದಲ್ಲಿ ಸೂಪರ್ ಮಾರ್ಕೆಟ್‌ಗಳಲ್ಲಿ ಈ ಆಹಾರ ಪದಾರ್ಥ ದೊರೆಯಲಿವೆ ಎನ್ನಲಾಗಿದೆ.

Post Comments (+)