ಸೋಮವಾರ, ಆಗಸ್ಟ್ 19, 2019
24 °C

ಕೃತಕ ಮೂಳೆ ಅಳವಡಿಕೆ: ಯಶಸ್ವಿ ಶಸ್ತ್ರಚಿಕಿತ್ಸೆ

Published:
Updated:
ಕೃತಕ ಮೂಳೆ ಅಳವಡಿಕೆ: ಯಶಸ್ವಿ ಶಸ್ತ್ರಚಿಕಿತ್ಸೆ

ಬೆಂಗಳೂರು: ವೃದ್ಧಾಪ್ಯದಲ್ಲೂ ಸವೆದಿರುವ ಸೊಂಟದ ಮೂಳೆಗಳನ್ನು ಸೀಮೇನೆಟ್ ಬಳಕೆ ಮಾಡದೇ ಇಂಪ್ಲ್ಯಾಂಟ್ ಕೃತಕ ಮೂಳೆಯನ್ನು ಅಳವಡಿಸುವ ಮೂಲಕ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಸರ್ಕಾರಿ ಸ್ವಾಮ್ಯದ ಸಂಜಯಗಾಂಧಿ ಅಪಘಾತ ಮತ್ತು ಸಂಶೋಧನಾ ಸಂಸ್ಥೆಯ ತಜ್ಞರು ಯಶಸ್ವಿಯಾಗಿದ್ದಾರೆ.ಸಾಮಾನ್ಯವಾಗಿ ವಯಸ್ಸಾದಂತೆ ಸೊಂಟದ ಮೂಳೆಗಳ ರಕ್ತ ಚಲನೆ ಕಡಿಮೆಯಾಗಿ ಮೂಳೆ ಸವೆಯಲು ಆರಂಭಿಸುತ್ತದೆ. ಆದರೆ ರಾಯಚೂರು ಜಿಲ್ಲೆಯ ಗುಂಡಮ್ಮ  (65) ಅವರ ಸೊಂಟದ ಕೀಲು ಮೂಳೆ ಸಂಪೂರ್ಣವಾಗಿ ಸವೆದಿತ್ತು. ಹೆಚ್ಚು ಸವೆದು ಕೀಲಿನ ಆಕಾರವೂ ಬದಲಾಗಿ ಹೋಗಿತ್ತು. ಈ ಮೂಳೆಯನ್ನು ಬದಲಾಯಿಸುವ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆಯ  ಮೂಳೆತಜ್ಞ ಡಾ.ವೈ.ಎಸ್.ಶಿವಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.`ಈ ಮೊದಲು ಸಾಮಾನ್ಯವಾಗಿ ಸೀಮೆನೆಟ್ (ಸಿಮೆಂಟ್ ಮಾದರಿಯ ಅಂಟು) ಬಳಸಿ ಮೂಳೆಯನ್ನು ಕೂಡಿಸುವ ವ್ಯವಸ್ಥೆಯಿತ್ತು. ಆದರೆ ಇದು ದೀರ್ಘಕಾಲ ಬರುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಈಗ ಸೀಮೆನೆಟ್ ಇಲ್ಲದೇ ಇಂಪ್ಲ್ಯಾಟ್ ಮೂಳೆಯನ್ನು ಅಳವಡಿಸಿ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿದೆ. ಇದರಿಂದ ಮೂಳೆಯೂ ಬೇಗನೇ ಕೂಡಿಕೊಳ್ಳುವುದು ಮಾತ್ರವಲ್ಲದೇ ದೀರ್ಘಕಾಲ ಯಾವುದೇ ತೊಂದರೆಯಿರುವುದಿಲ್ಲ' ಎಂದರು.

ಸಂಪರ್ಕಕ್ಕೆ: 9845371435, ಆಸ್ಪತ್ರೆ-  080-26564516.

Post Comments (+)