ಕೃತಕ ಸೌರ ರಕ್ಷಾ ಕವಚ ಅಳವಡಿಕೆ?

7

ಕೃತಕ ಸೌರ ರಕ್ಷಾ ಕವಚ ಅಳವಡಿಕೆ?

Published:
Updated:

ಜಾಗತಿಕ ತಾಪಮಾನ ತಡೆಗೆ ವಿಭಿನ್ನ ಚಿಂತನೆಹೈದರಾಬಾದ್ (ಐಎಎನ್‌ಎಸ್):
ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ ಸಲುವಾಗಿ ಬಾಹ್ಯಾಕಾಶದ್ಲ್ಲಲೇ ಕೃತಕ ಸೌರ ರಕ್ಷಾಕವಚ ಅಳವಡಿಸಿದರೆ ಹೇಗೆ?ಹೌದು. ಈ ಕುರಿತು ಇರಬಹುದಾದ ಸಾಧ್ಯತೆಗಳ ಕುರಿತು  ಹೈದರಾಬಾದ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ `11ನೇ ಜೀವ ವೈವಿಧ್ಯ ಮಹಾ ಸಮ್ಮೇಳನ~  (ಸಿಬಿಡಿ)ದಲ್ಲಿ ಭಾಗವಹಿ ಸಿರುವ ಸುಮಾರು 170 ರಾಷ್ಟ್ರಗಳ ಪರಿಸರ ವಿಜ್ಞಾನಿಗಳು ಮತ್ತು ತಜ್ಞರು ಚಿಂತನೆ ನಡೆಸುತ್ತಿದ್ದಾರೆ.ಬಾಹ್ಯಕಾಶದಲ್ಲಿ ಈ ಸೌರ ರಕ್ಷಾಕವಚ ಅವಳವಡಿಸಿ,  ಅದರ ಮೇಲ್ಮೈಗೆ  ಸಲ್ಫೇಟ್ ಲೇಪಿಸಿ, ಆ ಮೂಲಕ ಭೂಮಿಗೆ ತಲುಪುವ ಸೂರ್ಯನ ಕಿರಣಗಳ ತೀಕ್ಷ್ಣತೆಯನ್ನು  ಕಡಿಮೆಗೊಳಿಸುವ ಬಿಸಿಲು ಪ್ರತಿಫಲನ (ಎಸ್‌ಆರ್‌ಎಂ- ಸನ್‌ಲೈಟ್ ರಿಫ್ಲೆಕ್ಷನ್ ಮೆಥಡ್ಸ್) ಮತ್ತು ಇಂಗಾಲದ ಡೈ ಆಕ್ಸೈಡ್ ಹೊರತೆಗೆಯುವಿಕೆ (ಸಿಡಿಆರ್- ಕಾರ್ಬನ್ ಡೈ ಆಕ್ಸೈಡ್ ರಿಮೂವಲ್) ಎಂಬ ಜಿಯೋ ಎಂಜಿನಿಯರಿಂಗ್ ವಿಧಾನಗಳ ಕಡೆಗೆ ಎಲ್ಲರ ಚಿತ್ತ ಹರಿದಿದೆ.ಆದರೆ, ಜಾಗತಿಕ ತಾಪಮಾನ ಕಡಿಮೆ ಮಾಡುವ ಈ ನೂತನ ವಿಧಾನಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ತಜ್ಞರು, `ಎಸ್‌ಆರ್‌ಎಂ ಮತ್ತು ಸಿಡಿಆರ್ ವಿಧಾನಗಳು ಓಝೋನ್ ಪದರ, ಬೆಳಕಿನ ಶಕ್ತಿ ಮತ್ತು ಗುಣಮಟ್ಟ ಹಾಗೂ ಸಸ್ಯಗಳ ಆಹಾರ ಉತ್ಪಾದನೆ ಸೇರಿದಂತೆ  ಭೂಮಿಯ ಜೀವ ವೈವಿಧ್ಯತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ~ ಎಂದು ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry