ಶುಕ್ರವಾರ, ಮೇ 7, 2021
27 °C

ಕೃತಿಗಳ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಗೆ ಕಣ್ಣು ಇರುವೆ ಬಲ, ಹೊಳೆ ಬದಿಯ ಬೆಳಗು 

ಪ್ರೆಸ್ ಕ್ಲಬ್ ಆಫ್ ಬೆಂಗಳೂರು: ಕೋಟಿಗಾನಹಳ್ಳಿ ರಾಮಯ್ಯ ರಚಿಸಿರುವ `ಕಾಗೆ ಕಣ್ಣು ಇರುವೆ ಬಲ~ ಮತ್ತು ಕೇಶವ ಮಳಗಿ ವಿರಚಿತ `ಹೊಳೆ ಬದಿಯ ಬೆಳಗು~ ಪುಸ್ತಕಗಳು ಶನಿವಾರ ಲೋಕಾರ್ಪಣೆಯಾಗಲಿವೆ.

ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕೋಟಿಗಾನಹಳ್ಳಿ ರಾಮಯ್ಯ ಅವರ ಪುಸ್ತಕ ಪರಿಚಯ ಮಾಡಲಿದ್ದಾರೆ. ಲೇಖಕಿ ಎಚ್. ಎಸ್. ಚಂಪಾವತಿ ಅತಿಥಿಗಳಾಗಿ ಆಗಮಿಸಲಿದ್ದು, ಕೇಶವ ಮಳಗಿ ಅವರ ಕೃತಿ ಪರಿಚಯಿಸಲಿದ್ದಾರೆ.

ಕೃತಿಗಳ ಲೋಕಾರ್ಪಣೆ ನಂತರ ಆದಿಮ್ ಲಿವಿಂಗ್ ಥಿಯೇಟರ್ ತಂಡದಿಂದ ರಂಗಗೀತೆಗಳ ಹಾಡುಗಾರಿಕೆ ಏರ್ಪಡಿಸಲಾಗಿದೆ.

ಕಾಗೆ ಕಣ್ಣು ಇರುವೆ ಬಲ: ರಂಗಭೂಮಿ ಶುಷ್ಕ ಪ್ರಯೋಗ ಮಿತಿಗಳಿಗೆ ಒಗ್ಗಿಹೋಗಿರುವ ಈ ಹೊತ್ತಲ್ಲಿ ಕಾಗೆ ಕಣ್ಣು ಇರುವೆ ಬಲದ ಹೆಜ್ಜೆಗಳನ್ನು ನ್ಯಾಯಸಮ್ಮತ ಗ್ರಹಿಕೆಗಳ ಮೂಲಕ ನೋಡುವುದಾದರೆ ಇದು ಈ ಹೊತ್ತಿನ ಅರ್ಥಪೂರ್ಣ ನಾಟಕವಾಗಿದೆ. ಇದರಲ್ಲಿ ವಿಡಂಬನೆ ಇದೆ. ಹಾಗೇ ಸಾವು ಕೂಡ ಒಂದು ವಿಜೃಂಭಣೆಯ ವಿಷಯವಾಗಿದೆ.

ಹೊಳೆ ಬದಿಯ ಬೆಳಗು: ನಾವು ಜನಸಾಮಾನ್ಯರು ಅಂದುಕೊಳ್ಳವವರಲ್ಲಿ ಅಡಗಿರುವ ಅಪಾರ ಮಾನವೀಯ ಅಂಶ, ಧಾರಣಾ ಶಕ್ತಿ, ಬದುಕನ್ನು ಎಲ್ಲ ಘನತೆಯೊಂದಿಗೆ ಎದುರಿಸುವ ಅಸಾಮಾನ್ಯರ ಛಲವಂತಿಕೆಗಳು ಈ ಸಂಕಲನದ ಕಥೆಗಳಲ್ಲಿ ವಿಸ್ಮಯದಂತೆ ಅಡಗಿವೆ. ಬದುಕಿನ ಬಿಡುಗಡೆಗೆ, ಶುದ್ಧ ಸಂಗೀತಕ್ಕೆ ಕಟ್ಟಿಕೊಳ್ಳಬೇಕಾಗಿರುವುದು ಏನನ್ನು ಎಂಬ ತಾತ್ವಿಕ ಪ್ರಶ್ನೆಗಳನ್ನು ಕೂಡ ಈ ಕಥೆಗಳು ಎತ್ತುತ್ತವೆ.

ಸ್ಥಳ: ಪ್ರೆಸ್ ಕ್ಲಬ್ ಆವರಣ, ಕಬ್ಬನ್ ಉದ್ಯಾನ. ಸಂಜೆ 6.30.

ಧೀಮತಿಯರು, ಸ್ತ್ರೀ ಪಥ

ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್: ಭಾನುವಾರ ಕರ್ನಾಟಕ ಲೇಖಕಿಯರ ಸಂಘದ ಸಹಯೋಗದೊಂದಿಗೆ ನವಕರ್ನಾಟಕ ಪ್ರಕಾಶನದ ವನಿತಾ ಚಿಂತನ ಮಾಲೆಯ ಮೂರು ಕೃತಿಗಳ ಲೋಕಾರ್ಪಣೆ.

ನಾಗಮಣಿ ಎಸ್.ರಾವ್ ಅವರ `ಧೀಮತಿಯರು~, `ಸ್ತ್ರೀ ಪಥ~, ಗೀತಾ ಶೆಣೈ ಅನುವಾದದ `ಕಮಾಲಾದೇವಿ ಚಟ್ಟೋಪಾಧ್ಯಾಯ ಬದುಕು ಸಾಧನೆ~, ಕೃತಿಗಳ ಲೋಕಾರ್ಪಣೆ.

ಅಧ್ಯಕ್ಷತೆ, ಕೃತಿಗಳ ಅನಾವರಣ-ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ, ಕೃತಿಗಳ ಪರಿಚಯ-ಡಿ.ಮಂಗಳಾ ಪ್ರಿಯದರ್ಶಿನಿ.

ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಬೆಳಿಗ್ಗೆ 10.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.