ಕೃತಿಗಳ ಲೋಕಾರ್ಪಣೆ

ಗುರುವಾರ , ಜೂಲೈ 18, 2019
22 °C

ಕೃತಿಗಳ ಲೋಕಾರ್ಪಣೆ

Published:
Updated:

ಕುಮಾರ್...

ಅವಿರತ ಪುಸ್ತಕ, ಕರ್ನಾಟಕ ಲಲಿತ ಕಲಾ ಅಕಾಡೆಮಿ: ಶನಿವಾರ ಕಲಾವಿದ ಪ.ಸ. ಕುಮಾರ್ ಅವರನ್ನು ಕುರಿತ `ಪ.ಸ.ಕುಮಾರ್; ಹುಟ್ಟಿದ ರೇಖೆ ಕಟ್ಟಿದ ಹಾಡು~ ಕೃತಿಯ ಲೋಕಾರ್ಪಣೆ. ಅತಿಥಿಗಳು: ವಿಶ್ವೇಶ್ವರ ಭಟ್, ಜಯಂತ್ ಕಾಯ್ಕಿಣಿ. ಇದೇ ಸಂದರ್ಭದಲ್ಲಿ ಪ.ಸ.ಕುಮಾರ್ ಜೀವನ, ಕಲೆ ಕೃತಿಯ ಬಗ್ಗೆ ಸ್ಲೈಡ್ ಶೋ. ಸ್ಥಳ: ಚಾವಡಿ (ಕರ್ನಾಟಕ ನಾಟಕ ಅಕಾಡೆಮಿ), ಕನ್ನಡ ಭವನ, ಜೆ.ಸಿ.ರಸ್ತೆ. ಸಂಜೆ 6.

ತಮಾಷೆ ಸುಳಿ, ಕಾಮನಬಿಲ್ಲು

ಸಪ್ತಗಿರಿ ಮತ್ತು ಕೆಕೆ ಪಬ್ಲಿಷರ್ಸ್:
ಸೋಮವಾರ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರಿಂದ ಸಂಪಿಗೆ ತೋಂಟದಾರ್ಯ ಅವರ `ತಮಾಷೆ ಸುಳಿ~ (ಲೇಖನ) ಮತ್ತು `ಕಾಮನಬಿಲ್ಲು~ (ಪತ್ತೇದಾರಿ ನಾಟಕ) ಲೋಕಾರ್ಪಣೆ. ಅಧ್ಯಕ್ಷತೆ: ಸಿ. ವೀರಣ್ಣ. ಕೃತಿ ಕುರಿತು: ಎಲ್.ಎನ್. ಮುಕುಂದರಾಜ್.

ಸ್ಥಳ: ಪಂಪ ಸಭಾಂಗಣ, ಕರ್ನಾಟಕ ಸಾಹಿತ್ಯ ಪರಿಷತ್ತು, 83 ಇ, 15ನೇ ಮೇನ್, ವಿಜಯನಗರ. ಸಂಜೆ 5.30.

ಪೀಯೂಷ ಧಾರಾ

ವೇದಾಂತ ಸತ್ಸಂಗ ಕೇಂದ್ರ: ಸೋಮವಾರ ಎಸ್. ರಾಮಚಂದ್ರ ಅಯ್ಯರ್ ಅವರಿಂದ ಕೆ.ಜಿ.ಸುಬ್ರಾಯಶರ್ಮಾ ಅವರ ಉಪನ್ಯಾಸ ಸಂಗ್ರಹದ `ಪೀಯೂಷ ಧಾರಾ~ ಕೃತಿ ಲೋಕಾರ್ಪಣೆ. ಕೃತಿ ಪರಿಚಯ: ಎಸ್.ಆರ್. ಅನಂತಮೂರ್ತಿ. ಅತಿಥಿ: ಸಿ.ಕೆ. ಸುಬ್ಬನರಸಿಂಹ, ಯು.ಎಚ್.ಸುಬ್ರಹ್ಮಣ್ಯ. ಅಧ್ಯಕ್ಷತೆ: ಟಿ. ಅಶ್ವತ್ಥನಾರಾಯಣ ರಾವ್.

 ಸ್ಥಳ:  ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ. ಬೆಳಿಗ್ಗೆ 9. ಮಾಹಿತಿಗೆ: 98862 81622.

ಭಾಗವತ

ಶ್ರೀ ರಾಘವೇಂದ್ರ ದರ್ಶನ ಕೇಂದ್ರ: 
ಶನಿವಾರ ಉಡುಪಿ ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರಿಂದ `ಸಪ್ತಾಹ ಕ್ರಮದಲ್ಲಿ ಶ್ರೀಮದ್ ಭಾಗವತ~ (ಸಂಪಾದಕರು: ಶ್ರೀನಿವಾಸ.), `ಮಂತ್ರಾಲಯದ ದಿವ್ಯ ಚೇತನ~ ಶ್ರೀರಾಘವೇಂದ್ರ ಸ್ವಾಮಿಗಳ ಸಂಕ್ಷಿಪ್ತ ಪರಿಚಯ (ಲೇಖಕರು: ಸಿ.ಎಚ್.ಬದರಿನಾಥ್) ಕೃತಿಗಳು ಮತ್ತು ದೇವರನಾಮಗಳ ಧ್ವನಿ ಸುರುಳಿ ಲೋಕಾರ್ಪಣೆ.

ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ತರಿಗುಪ್ಪ ಮುಖ್ಯ ರಸ್ತೆ. ಸಂಜೆ 6.30.

ಬದುಕು ಬಯಲು

ಲಂಕೇಶ್ ಪ್ರಕಾಶನ: ಶನಿವಾರ ಸಿ.ಎಸ್.ದ್ವಾರಕಾನಾಥ್ ಅವರಿಂದ ಎ.ರೇವತಿ ಅವರ `ಬದುಕು ಬಯಲು~ (ಹಿಜ್ರಾ ಒಬ್ಬಳ ಆತ್ಮಕತೆ) ಕೃತಿ ಲೋಕಾರ್ಪಣೆ. ಕೆ. ಷರೀಫಾ ಅವರಿಂದ ಕೃತಿಯ ಆಯ್ದ ಭಾಗಗಳ ವಾಚನ. ಅಧ್ಯಕ್ಷತೆ: ಗೌರಿ ಲಂಕೇಶ್. ಅತಿಥಿಗಳು: ಬಿ.ಟಿ.ವೆಂಕಟೇಶ್, ದು.ಸರಸ್ವತಿ, ಶುಭಾ ಚಾಕೋ.

ಸ್ಥಳ: ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ. ಸಂಜೆ 5.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry