ಭಾನುವಾರ, ಮೇ 16, 2021
23 °C

ಕೃತಿ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರಿಯಾಡ್ಸ್, ಭಗವಂತನ...

ಸುಂದರ ಪ್ರಕಾಶನ- ಸಾಹಿತ್ಯ:  ಭಾನುವಾರ ಎಸ್.ಎ. ಕೀರ್ತನಾ ಬರೆದ `ದಿ ಕೆರಿಯಾಡ್ಸ್~ ಇಂಗ್ಲಿಷ್ ಕಾದಂಬರಿ ಮತ್ತು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ `ಭಗವಂತನ ಭಾವಗೀತೆ~ ಕೃತಿಗಳ ಲೋಕಾರ್ಪಣೆ. ನಟ ಶ್ರಿಧರ್, ಕ್ಲಾರಿಯೋನೆಟ್ ವಾದಕ ಡಾ.ನರಸಿಂಹಲು ವಡವಾಟಿ ಅವರಿಗೆ ಸನ್ಮಾನ. ವಡವಾಟಿ ಅವರಿಂದ ಸಂಗೀತ ಕಛೇರಿ.ಬೆಂಗಳೂರು ಮೂಲದ ಕೀರ್ತನಾ ಕನಕಪುರ ರಸ್ತೆಯ ದೀಕ್ಷಾ ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ. 8ನೇ ತರಗತಿಯಲ್ಲಿ ಇದ್ದಾಗಲೇ `ಕೆರಿಯಾಡ್ಸ್~ ರಚನೆ ಪ್ರಾರಂಭಿಸಿದರು. ಇದು ಈಕೆಯ ಮೊದಲ ಪ್ರಯತ್ನ.ಇವರಿಗೆ ಬಾಲ್ಯದಿಂದಲೂ ಲೇಖನಿಯ ಗೀಳು. ಕವನಗಳನ್ನು ಬರೆಯುತ್ತಿದ್ದಾರೆ. ಚಿಕ್ಕವಳಿದ್ದಾಗ ಅಮ್ಮ ಮತ್ತು ಅಜ್ಜಿಯಂದಿರು ಹೇಳುತ್ತಿದ್ದ ನೀತಿ ಕಥೆಗಳೇ ಇವರ ಬರವಣಿಗೆಗೆ ಸ್ಫೂರ್ತಿಯಾಯಿತು. ಅದರ ಫಲವಾಗಿಯೇ ಐತಿಹಾಸಿಕ ಕಲ್ಪಿತ ಶಿರ್ಷಿಕೆಯ `ಕೆರಿಯಾಡ್ಸ್~ ಮೂಡಿಬಂದಿದೆ.ಡಾ. ಕಬ್ಬಿನಾಲೆ ಅನುವಾದಿಸಿದ ಭಗವದ್ಗೀತೆಯ ಸಂಕಲನವೇ `ಭಗವಂತನ ಭಾವಗೀತೆ~. ಇದರಲ್ಲಿ ಭಗವದ್ಗೀತೆಯ ಆಯ್ದ ಪದ್ಯಗಳನ್ನು 48 ಖಂಡ ಕವನಗಳಾಗಿ ಪೋಣಿಸಿದ್ದಾರೆ.ಅತಿಥಿಗಳು: ಪ್ರೊ.ಎಲ್.ಎಸ್. ಶೇಷಗಿರಿರಾವ್, ಪ್ರೊ.ಹಂ.ಪ.ನಾಗರಾಜಯ್ಯ. 

ಸ್ಥಳ: ಪ್ರಾದೇಶಿಕ ಸಹಕಾರ ತರಬೇತಿ ಸಂಸ್ಥೆ ಸಭಾಂಗಣ, ಪದ್ಮನಾಭನಗರ, ಬನಶಂಕರಿ 2ನೇ ಹಂತ. ಬೆಳಿಗ್ಗೆ11.30.ಸಾರ್ಥಕ ಜೀವಿ

ಜೀವಿ ಕುಟುಂಬ: ಭಾನುವಾರ ಗಣಪತಿ ವಿಸರ್ಜನಾ ಸಮಾರಂಭ. ಗಂಗಾಬಿಕೆ ವೀರಭದ್ರಪ್ಪ ಅವರಿಂದ  ಶೈಲಜಾ ಅಂಗಡಿ ಅವರ `ಸಾರ್ಥಕ ಜೀವಿ~ (ರೈಲ್ವೆ ಸ್ಟೇಷನ್ ಮಾಸ್ಟರ್ ಜಿ.ವೀರಭದ್ರಪ್ಪ ಅವರ ಆಪ್ತಕಥೆ) ಕೃತಿ ಲೋಕಾರ್ಪಣೆ. ಕುಮಾರ ಕಣವಿ ಮತ್ತು ತೇಜಸ್ವಿನಿ ರಾಜು ತಂಡದಿಂದ ಲಘು ಸಂಗೀತ. ಕೃತಿ ಕುರಿತು: ಜರಗನಹಳ್ಳಿ ಶಿವಶಂಕರ್.ಸ್ಥಳ: ನಂ364, ಬಿ, ರೈಲ್ವೆ ಕ್ವಾರ್ಟಸ್, ಎಂ.ಬಿ. ಕಾಲೋನಿ, ರೈಲ್ವೆ ಆಸ್ಪತ್ರೆ ರಸ್ತೆ, ರೈಲ್ವೆ ನಿಲ್ದಾಣ ಹಿಂಭಾಗ. ಬೆಳಿಗ್ಗೆ 10.ಕಾರ್ಡಿದ್ರೆ... ಬೆಸ್ಟ್ ಆಫ್... ಕಾಲ

ಅಂಕಿತ ಪುಸ್ತಕ:  ಭಾನುವಾರ ಹಂಸಲೇಖ ಅವರಿಂದ ಎಚ್.ಡುಂಡಿರಾಜ್ ಅವರ `ಕಾರ್ಡಿದ್ರೆ ಕೈಲಾಸ~ (ನಗೆ ಪುಟಗಳ ಸಂಪುಟ), ಬಸವರಾಜ ಹೂಗಾರ ಸಂಪಾ ದಿಸಿರುವ `ಬೆಸ್ಟ್ಆಫ್ಎಚ್.ಎಲ್.ಕೇಶವಮೂರ್ತಿ~ (ಎಚ್.ಎಲ್.ಕೇಶವಮೂರ್ತಿ ಅವರ ಆಯ್ದ ಅತ್ಯುತ್ತಮ ಹಾಸ್ಯ ಬರಹಗಳು), ಡಾ.ಎಂ. ಶಿವರಾಂ ಅವರ `ಕಾಲ~ (ಒಂದು ಸಮಗ್ರ ಚಿಂತನೆ) ಕೃತಿಗಳ ಲೋಕಾರ್ಪಣೆ. ಅತಿಥಿಗಳು: ವೈ.ವಿ. ಗುಂಡೂರಾವ್, ಅಪರಂಜಿ ಶಿವಕುಮಾರ್, ಎಚ್.ಎಲ್.ಕೇಶವಮೂರ್ತಿ. ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ವಾಡಿಯಾ ರಸ್ತೆ, ಬಸವನಗುಡಿ. ಬೆಳಿಗ್ಗೆ 10.30.ಗುರಿ ಹೆಗ್ಗುರಿ

ಪ್ರೆಸ್ ಕ್ಲಬ್ ಆಫ್ ಬೆಂಗಳೂರು: ಶನಿವಾರ ನಟ ರಮೇಶ್ ಅರವಿಂದ್ ಅವರಿಂದ ಗಣೇಶ್ ಕಾಸರಗೋಡು  ಬರೆದಿರುವ `ಗುರಿ ಹೆಗ್ಗುರಿ~ ಕೃತಿ ಲೋಕಾರ್ಪಣೆ. ಕೃತಿ ಕುರಿತು: ನಾಗತಿಹಳ್ಳಿ ಚಂದ್ರಶೇಖರ್. ಅತಿಥಿ: ಲಹರಿವೇಲು. ಅಧ್ಯಕ್ಷತೆ: ಎಂ.ಎ. ಪೊನ್ನಪ್ಪ. ಸ್ಥಳ: ಪ್ರೆಸ್ ಕ್ಲಬ್ ಆವರಣ, ಕಬ್ಬನ್ ಪಾರ್ಕ್. ಬೆಳಿಗ್ಗೆ 11.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.