ಕೃತ್ತಿಕಾ ಪ್ರಕರಣ: ಹಿಲರಿ ಮಧ್ಯಪ್ರವೇಶಕ್ಕೆ ಮನವಿ

ಸೋಮವಾರ, ಜೂಲೈ 22, 2019
27 °C

ಕೃತ್ತಿಕಾ ಪ್ರಕರಣ: ಹಿಲರಿ ಮಧ್ಯಪ್ರವೇಶಕ್ಕೆ ಮನವಿ

Published:
Updated:

ವಾಷಿಂಗ್ಟನ್ (ಐಎಎನ್‌ಎಸ್): ಭಾರತೀಯ ರಾಜತಾಂತ್ರಿಕರ ಪುತ್ರಿ ಕೃತ್ತಿಕಾ ಬಿಸ್ವಾಸ್ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವಂತೆ ಆಕೆಯ ವಕೀಲ ರವಿ ಬಾತ್ರಾ    ಅವರು ಅವೆುರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರನ್ನು ಕೋರಿದ್ದಾರೆ.ಈ ಮೂಲಕ ಇತರ ದೇಶಗಳು ಅವೆುರಿಕದ ವಿರುದ್ಧ ಪ್ರತೀಕಾರ ಕೈಗೊಳ್ಳುವ ಸಾಧ್ಯತೆಯನ್ನು ತಪ್ಪಿಸಬೇಕು ಎಂದು ಅವರು ಇದೇ ಒಂದರಂದು ಕ್ಲಿಂಟನ್ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಪ್ರೌಢಶಾಲಾ ವಿದ್ಯಾರ್ಥಿನಿಯಾದ ಕೃತ್ತಿಕಾ, ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿಯ ಅಧಿಕಾರಿ ದೇವಶಿಶ್ ಬಿಸ್ವಾಸ್ ಅವರ ಪುತ್ರಿ. ತನ್ನ ಶಿಕ್ಷಕರಿಗೆ ಅಶ್ಲೀಲ ಇ ಮೇಲ್ ಕಳುಹಿಸಿದ್ದ ಆರೋಪದ ಮೇಲೆ ಪೊಲೀಸರು ಕೈಕೋಳ ತೊಡಿಸಿ ಅವರನ್ನು ಬಂಧಿಸಿದ್ದರು.ತಮ್ಮನ್ನು ತಪ್ಪಾಗಿ ಅರ್ಥೈಸಿ ಕಿರುಕುಳ ನೀಡಲಾಯಿತು ಎಂದು ಆರೋಪಿಸಿರುವ ಕೃತ್ತಿಕಾ, ಅದಕ್ಕಾಗಿ ಪರಿಹಾರ ಕೋರಿ ನ್ಯೂಯಾರ್ಕ್ ಆಡಳಿತದ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry