ಕೃಪೆ ತೋರಿದ ವರುಣ

7

ಕೃಪೆ ತೋರಿದ ವರುಣ

Published:
Updated:

ರಾಮದುರ್ಗ: ಸತತ ಎರಡ್ಮೂರು ತಿಂಗಳಿಂದ ಕೃಪೆ ತೋರದ ಮಳೆರಾಯನ ಕೋಪಕ್ಕೆ ಬಲಿಯಾಗಿ ಬಿಸಿಲಿನಿಂದ ಕಂಗೆಟ್ಟಿದ್ದ ಪಟ್ಟಣದ ಜನತೆಗೆ ಬುಧವಾರ ಸುಮಾರು 15-20 ನಿಮಿಷಗಳಲ್ಲಿ ಸುರಿದ ಬಾರಿ ಮಳೆಯಿಂದ ಬಿಸಿಲಿನ ತಾಪದಿಂದ ಮುಕ್ತಿ ದೊರೆಯಿತು.ಈ ಮಳೆಯಿಂದ ಪಟ್ಟಣದ ಅನೇಕ ರಸ್ತೆಗಳು ನೀರಿನಿಂದ ಜಲಾವೃತಗೊಂಡವು. ಅಲ್ಲದೇ ವಾಹನಗಳ ಸಂಚಾರಕ್ಕೂ ಅಲ್ಪ ಪ್ರಮಾಣದ ಅಡಚಣೆ ಉಂಟಾಯಿತು.ಬಾರಿ ಮಳೆಯಿಂದಾಗಿ ಪಟ್ಟಣದ ಚರಂಡಿಗಳಲ್ಲಿನ ನೀರು ರಸ್ತೆ ಮೇಲೆಯೆ ಹರಿದು ಚರಂಡಿಗಳಲ್ಲಿನ ಕಸಕಡ್ಡಿ, ಪ್ಲಾಸ್ಟಿಕ್ ರಸ್ತೆಯಲ್ಲಿ ಶೇಖರಣೆಗೊಂಡವು.ಸಾರ್ವಜನಿಕರು ಕೊಳಚೆ ನೀರಿನಲ್ಲಿ ಸಂಚರಿಸುತ್ತಿರುವುದು ಎಲ್ಲೆಡೆ ಸಾಮಾನ್ಯವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry