ಶುಕ್ರವಾರ, ಜೂನ್ 25, 2021
29 °C

ಕೃಷಿಯಲ್ಲಿ ತೊಡಗಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹುಲಕೋಟಿ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿ ಎಸ್.ಕೆ.ಮುದ್ಲಾಪೂರ ಹೇಳಿದರು. ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಹಾಗೂ ಕೃಷಿ ಇಲಾಖೆ (ಆತ್ಮ ಯೋಜನೆ) ಇವರ ಆಶ್ರಯದಲ್ಲಿ ಕ್ಷೇತ್ರ ಪಾಠ ಶಾಲೆಯ ಕಾರ್ಯಕ್ರಮದ ಅಡಿಯಲ್ಲಿ  ಸ್ಥಳೀಯ ಲೋಕಪ್ಪ ರಾಠೋಡ್ ಅವರ ಶೇಂಗಾ ಹೊಲದಲ್ಲಿ ಏರ್ಪಡಿಸಿದ್ದ ಬೇಸಿಗೆ ಹಂಗಾಮಿನ ಶೇಂಗಾ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವ ಕಾರಣಕ್ಕಾಗಿ ಯುವಕರು ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇಂಥ ಮನೋ ಭಾವದಿಂದ ಹೊರಬರ ಬೇಕು ಎಂದು ಸಲಹೆ ನೀಡಿದರು. ಕೃಷಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸುತ್ತಿರುವುದರಿಂದ  ಕೃಷಿ ಪ್ರದೇಶ ಬರಡಾಗುತ್ತಿದೆ. ಪರಿಣಾಮ ಬಿತ್ತನೆ ಯಿಂದ ಬೆಳೆ ನಿರ್ವಹಣೆಗೆ ಮಾಡಿದ ಖರ್ಚು ಸಹ ಲಭಿಸುತ್ತಿಲ್ಲ. ಪ್ರತಿ ವರ್ಷ ಬರೀ ನಷ್ಟದ ಮುಖವನ್ನೇ ನೋಡಬೇಕಾದ ಅನಿವಾರ್ಯತೆ ಇದೆ ಎಂಬ ಕೊರಗಿನೊಂದಿಗೆ ಬಹುತೇಕರು ಕೃಷಿ ಬಗ್ಗೆ ಅಸಡ್ಯ ಮನೋಭಾವ ತಾಳಲು ಪ್ರಮುಖ ಕಾರಣ ಎಂದರು.ವೈಜ್ಞಾನಿಕ ಬಿತ್ತನೆಯ ವಿಧಾನಗಳ ಜೊತೆಗೆ ಸಾವಯವ ಕೃಷಿ ಪದ್ದತಿಗೆ ಹೆಚ್ಚು ಮಹತ್ವ ನೀಡಬೇಕು. ಅಂದಾಗ ಮಾತ್ರ ಕೃಷಿಯಲ್ಲಿ ಲಾಭ ದೊರಕುವುದರ ಜೊತೆಗೆ ಭೂಮಿಯ ಫಲವತ್ತತೆ ಹೆಚ್ಚಿಸಲು ಸಾಧ್ಯ ಎಂದರು.ವಿಜ್ಞಾನಿ ವಿ.ಡಿ,ವೈಕುಂಟೆ ಮಾತ ನಾಡಿ, ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ಆದ್ಯತೆ ನೀಡುವ ಮೂಲಕ ಉತ್ತಮ ಪರಿಸರ ಕಾಯ್ದುಕೊಳ್ಳಲು ಸಾಧ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ರೈತರಿಗೆ ಸಾವಯವ ಹಾಗೂ ನೈಸರ್ಗಿಕ ಕೃಷಿಯ ಕುರಿತು ಮಾಹಿತಿ ನೀಡುವುದು ಅಗತ್ಯತೆ ಇದೆ ಎಂದರು.ಭಾರತ ದೇಶ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಶೇ.70 ರಷ್ಟು ಜನ ಕೃಷಿ ಕ್ಷೇತ್ರ ಅವಲಂಬಿಸಿದ್ದಾರೆ. ಕೃಷಿಯಲ್ಲಿ ಆಗುತ್ತಿರುವ ಬದಲಾವಣೆಯಿಂದಾಗಿ ಹಲವಾರು ಆವಿಷ್ಕಾರಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆಗೆ ಮಾನವನ ದುರಾಸೆಯಿಂದ ಹಿನ್ನಡೆಯಾಗಿದೆ ಎಂದರು.ಕೃಷಿ ಮಾನವನ ಜೀವನದ ಜೀವಾಳವಾಗಿರುವಂತೆ ಪರಿಸರ ಮಾನವನ ಬದುಕಿನ ಅವಶ್ಯಕತೆಯಾಗಿದೆ. ಶಿಕ್ಷಣದ ಪಠ್ಯಕ್ರಮದಲ್ಲಿ ಕೃಷಿ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ನೂತನ ಕೃಷಿ ಕ್ಷೇತ್ರದ ಬೆಳವಣಿಗೆ ತಂತ್ರಜ್ಞಾನದ ಕುರಿತು ಮಾಹಿತಿ ನೀಡಬೇಕಾಗಿದೆ ಎಂದರು.ನೀರು ಮಣ್ಣು ಹಾಗೂ ವಾಯು ಮಾಲಿನ್ಯದಿಂದಾಗಿ ಜೀವ ಸಂಕುಲ ಸಂಕಷ್ಟದಲ್ಲಿದೆ ಎಂದರು. ರೈತರಾದ ಲಾಲಪ್ಪ ರಾಠೋಡ್, ಎಚ್.ಎಸ್.ಸೋಂಪೂರ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೆಂಕೂಸಾ ಭಾಂಡಗೆ, ಶರಣಪ್ಪ ರೇವಡಿ, ವಿಶ್ವನಾಥಸಾ ಮೇಘರಾಜ, ಶಶಿಧರ ಹೂಗಾರ, ಮಲ್ಲಯ್ಯ ಪೂಜಾರ, ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.