`ಕೃಷಿಯಲ್ಲಿ ವೈಜ್ಞಾನಿಕ ಜ್ಞಾನ ಅಗತ್ಯ'

7

`ಕೃಷಿಯಲ್ಲಿ ವೈಜ್ಞಾನಿಕ ಜ್ಞಾನ ಅಗತ್ಯ'

Published:
Updated:
`ಕೃಷಿಯಲ್ಲಿ ವೈಜ್ಞಾನಿಕ ಜ್ಞಾನ ಅಗತ್ಯ'

ಆಳಂದ: ಭೂಮಿಗೆ ಗೊಬ್ಬರ, ಕ್ರಿಮಿನಾಶಕ, ಔಷಧ ಬಳಸಿ ಭೂಮಿಯನ್ನು ಸತ್ವಹೀನ ಮಾಡದೇ ಸಾವಯವ ಗೊಬ್ಬರ ಬಳಸಿ ಭೂಮಿಯ ಫಲವತ್ತತೆಯನ್ನು ಕಾಪಾಡಿ ವೈಜ್ಞಾನಿಕ ಜ್ಞಾನದೊಂದಿಗೆ ಕಡಿಮೆ ಭೂಮಿಯಲ್ಲೂ ಹೆಚ್ಚಿನ ಇಳುವರಿಯನ್ನು ಪಡೆಯಲು ರೈತರು ಮುಂದಾಗುವಂತೆ ರಾಜ್ಯ ಕೃಷಿ ಮಿಶನ್ ಅಧ್ಯಕ್ಷ ಡಾ.ಎಸ್.ಎ.ಪಾಟೀಲ ಸಲಹೆ ನೀಡಿದರು.ಅವರು ತಾಲ್ಲೂಕಿನ ತಡಕಲ ಗ್ರಾಮದಲ್ಲಿ ಮಂಗಳವಾರ ನೇಗಿಲಯೋಗಿ ಹಾಗೂ ಫಾರ್ಮರ್ಸ್‌ ಫೆಡರೇಶನ ಆಶ್ರಯದಲ್ಲಿ ಮಿನಿ ದಾಲ್ ಮಿಲ್, ಗೊಬ್ಬರ ಮತ್ತು ಕೀಟನಾಶಕ ಘಟಕದ ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರ್ಕಾರ ಕೃಷಿಗೆ ಹಲವಾರು ಯೋಜನಗಳ ಮೂಲಕ ಸಲಕರಣೆಗಳು, ಯಂತ್ರೋಪಕರಣಗಳು, ಬೀಜ ಗೊಬ್ಬರಗಳನ್ನು ರಿಯಾಯತಿ ದರದಲ್ಲಿ ನೀಡುತ್ತಿದೆ. ಇದರ ಸದುಪಯೋಗ ರೈತರುಪಡೆದುಕೊಳ್ಳಬೇಕು. ರೈತರು ಮನೆಯಲ್ಲಿ ಬೀಜಗಳನ್ನು ಸಂಗ್ರಹಿಸುವುದು, ವ್ಶೆಜ್ಞಾನಿಕ ಮಾದರಿಯಲ್ಲಿ ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚಿನ ಆದಾಯ ಬರುವಂತೆ ಹೊಸ ಹೊಸ ಬೇಳೆಗಳನ್ನು ಬೆಳೆಯಬೇಕು ಎಂದು ಅವರು  ಹೇಳಿದರು.ನೇಗಿಲಯೋಗಿ ತಾಲ್ಲೂಕು ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ ಮಾತನಾಡಿ, ತಡಕಲ್ ಗ್ರಾಮದಲ್ಲಿ 10 ಗ್ರಾಮಗಳ ರೈತ ಸಂಘಗಳು ಕೂಡಿಕೊಂಡು ಕೇಂದ್ರ ಸ್ಥಾಪಿಸಿದ್ದು ಬರುವ ದಿನಗಳಲ್ಲಿ ಈ ಘಟಕ ರೈತರಿಗೆ ವರದಾನವಾಗಲಿ. ಈ ನೇಗಿಲಯೋಗಿ ಘಟಕಕ್ಕೆ 30 ಲಕ್ಷ ಧನಸಹಾಯವನ್ನು ನೀಡಿದ್ದು,  ಇದೊಂದು ಮಾದರಿಯ ಘಟಕ ಆಗುವ ರೀತಿಯಲ್ಲಿ ಷೇರು ಪಡೆದ ಸದಸ್ಯರು ಶ್ರಮಿಸಬೇಕೆಂದರು."ನವದೆಹಲಿಯ ಒಸಿಪಿ ಅಧಿಕಾರಿ ಪ್ರೊ. ಎಂ. ಭದ್ರಾವಿ ಡಾ.ಸುದರ್ಶನ ಸೂರ್ಯವಂಶಿ,

ಡಾ.ಸತೀಶಚಂದ್ರ, ಡಾ.ಕೆ.ಎಲ್.ಚೌಲಾ, ಡಾ. ಅಬ್ದಲ ರೆಹಮಾನ, ಡಾ. ನಾಫೇಲ, ನಿರ್ದೇಶಕ ಡಾ.ವೇದಪ್ರಕಾಶ ಶರ್ಮಾ, ಬೀದರಿನ ಯೋಜನಾಧಿಕಾರಿ ವಿವೇಕ ಚಾಕೋತೆ, ತಾಂತ್ರಿಕ ಸಲಹೆಗಾರ ಪ್ರೇಮಸಿಂಗ ರಾಠೋಡ, ತಾಂತ್ರಿಕ ಸಲಹೆಗಾರ ಇಸ್ಮಾಯಿಲ ಇವರು ಮಾತನಾಡಿದರು. ಸ್ಥಳೀಯ ಮಠದ ಶ್ರಿ ಸಿದ್ದಮಲ್ಲ ಶಿವಾಚಾರ್ಯ ಸಾನಿದ್ಯ ವಹಿಸಿದ್ದರು.ಪ್ರಗತಿಪರ ರೈತರಾದ ಬಾಬುರಾವ ಹಿರಂಶೆಟ್ಟಿ, ಎಸ್.ಎಮ್.ಧುಲಂಗೆ, ಶಿವಾನಂದ ಬೇಳ್ಳೆ, ಸುಲ್ತಾನಪ್ಪಾ ವಾಗ್ದರ್ಗಿ, ಎಸ್.ಜಿ.ಮಲಶೆಟ್ಟಿ, ಸುಭಾಷ ಮುರುಡ, ಅರ್ಜುನ ಭಂಡಿ, ಬಸವರಾಜ ಬಿರಾದಾರ, ಎಸ್.ಬಿ.ಪಾಟೀಲ, ನೀಲಕಂಠ ಶಿರೋಳಿ ಇತರರು ಪಾಲ್ಗೊಂಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry