ಮಂಗಳವಾರ, ಏಪ್ರಿಲ್ 13, 2021
32 °C

ಕೃಷಿ ಅವನತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಲಾಂತರಿ ತಳಿಗಳು ಭಾರತದಂಥ ತಂತ್ರಜ್ಞಾನವರಿಯದ ಅವಿದ್ಯಾವಂತ ರೈತರಿರುವ ಹಾಗೂ ಬಡರಾಷ್ಟ್ರದಲ್ಲಿ ಲಾಭ ತರಲಾರವು. ಅಲ್ಲದೆ ವಿಜ್ಞಾನಿಗಳಿಂದ,ಪರಿಸರವಾದಿಗಳಿಂದ ಹಾಗೂ ರೈತ ಹೋರಾಟಗಾರರಿಂದ ಅದರ ಕೃಷಿ ನಿಷೇಧಕ್ಕೆ ಒತ್ತಡ ತರಲಾಯಿತು.ಸಚಿವ ಜೈರಾಂ ರಮೇಶ್‌ಅವರು ಬಿ.ಟಿ. ಬದನೆ ಬೆಳೆಗೆ ನಿಷೇಧ ಹೇರಿದರು. ಇದರಿಂದಾಗಿ ಮಾರುಕಟ್ಟೆಗೆ ಬಿಟಿ ಬದನೆ ಬರಲಿಲ್ಲ.ಕೇಂದ್ರ ಕೃಷಿ ಸಚಿವ ಶರದ್‌ಪವಾರ್ ಅವರು ಕುಲಾಂತರಿ ತಳಿಗಳ ನಿಷೇಧ ಹಿಂಪಡೆಯಬೇಕೆಂದು `ಕುಲಾಂತರಿ ತಂತ್ರಜ್ಞಾನ ಅನುಮೋದನಾ ಸಮಿತಿ~ ಮೇಲೆ ಒತ್ತಡ ಹೇರುತ್ತಿರುವುದಾಗಿ ವರದಿಯಾಗಿದೆ. ರೈತ ಕುಟುಂಬದಿಂದ ಬಂದ ಇವರು ಹಿಂದೆ ಶುಗರ್ ಲಾಬಿ ಮೂಲಕ ಕುಖ್ಯಾತಿ ಗಳಿಸಿ ಮೇಲೆ ಬಂದವರು. ರೈತರ ಹಿತಾಸಕ್ತಿ ಇಲ್ಲದ ಪರಿಸರ ವಿರೋಧಿ ಶರದ್ ಪವಾರ್‌ರಂಥವರನ್ನು ಯು.ಪಿ.ಎ. ನಾಯಕಿ ಸೋನಿಯಾ ಗಾಂಧಿ ಕೇಂದ್ರ ಸಚಿವ ಸಂಪುಟದಿಂದ ಕೈಬಿಡಲಿ, ಯಾವಾಗಲೂ ಕ್ರಿಕೆಟ್ ಆಟಗಾರರಂಥ ಹೊಟ್ಟೆ ತುಂಬಿದವರ ಕುರಿತು ಚಿಂತಿಸುವ ಇಂಥವರಿಂದ ದೇಶದ ಕೃಷಿ ಅವನತಿಯತ್ತ ಸಾಗುತ್ತಿದೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.